Vijay Antony : ಕೋಮಾಗೆ ಜಾರಿದ ತಮಿಳು ನಟ ವಿಜಯ್ ಆಂಟನಿ…
ಸಿನಿಮಾ ಚಿತ್ರೀಕರಣದ ವೇಳೆ ನಡೆದ ದೋಣಿ ಅಪಘಾತದಿಂದ ಗಂಬೀರವಾಗಿ ಗಾಯಗೊಂಡಿರುವ ತಮಿಳಿನ ಖ್ಯಾತ ನಟ ವಿಜಯ್ ಆಂಟನಿ ಕೋಮಾಗೆ ಜಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಮಲೇಷ್ಯಾದಲ್ಲಿ ನಡೆದ ಪಿಚ್ಚೈಕಾರನ್ 2 ಚಿತ್ರೀಕರಣದ ಶೂಟಿಂಗ್ ವೇಳೆ ನಡೆಯುತ್ತಿದ್ದ ಸಾಹಸ ಸನ್ನಿವೇಶದ ಸಮಯದಲ್ಲಿ ಈ ಎರಡು ದೋಣಿಗಳ ನಡುವೆ ಅಫಘಾತಕ್ಕೀಡಾಗಿದೆ ನಟ ವಿಜಯ್ ಆಂಟೋನಿ ಗಂಭೀರವಾಗಿ ಗಾಯಗೊಂಡಿದ್ದರು.
ವಿಜಯ್ ಆಂಟನಿ ಅವರನ್ನು ಮಲೇಷ್ಯಾದಿಂದ ಚೆನ್ನೈಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು. ವಿಜಯ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು ಎಂದು ಹೇಳಲಾಗಿತ್ತು. ಆದರೆ ಈಗಿನ ಮಾಹಿತಿ ಪ್ರಕಾರ ಇನ್ನೂ ಕೋಮಾ ಸ್ಥಿತಿಯಲ್ಲಿ ಇದ್ದಾರೆ ಅಂತ ವರದಿಯಾಗಿದೆ. ವಿಜಯ್ ಅವರ ಗಲ್ಲಕ್ಕೆ ಹೆಚ್ಚಿನ ಗಾಯವಾಗಿದ್ದು, ಮುಖದ ಭಾಗಕ್ಕೆ ಹೆಚ್ಚಿನ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಚಿತ್ರೀಕರಣದಲ್ಲಿ ಭಾಗಿಯಾಗಿದ್ದವರ ಹೇಳಿಕೆಯ ಪ್ರಕಾರ, ‘ಸಮುದ್ರ ಮಧ್ಯ ದೋಣಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ರಭಸವಾಗಿ ದೋಣಿಗಳು ಬರುವ ವೇಳೆಯಲ್ಲಿ ಒಂದು ದೋಣಿ ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ವಿಜಯ್ ಆಂಟನಿ ತೀವ್ರವಾಗಿ ಗಾಯಗೊಂಡಿದ್ದರು.
Vijay Antony: Tamil actor Vijay Antony slipped into a coma…








