ಕೊರೊನಾ ಸೋಂಕು – ಉಸಿರಾಡಲು ಆಗದೆ ನರಳಾಡುತ್ತಿದ್ದ ತಾಯಿಗೆ ಬಾಯಿ ಮೂಲಕ ಉಸಿರು ನೀಡಿದ ಮಗಳು
ಉತ್ತರಪ್ರದೇಶ : ಕೊರೊನಾ ಸೋಂಕಿನಿಂದಾಗಿ ಆಕ್ಸಿಜನ್ ಕೊರತೆಯಿಂದ ಸೋಂಕಿತ ತಾಯಿ ಉಸಿರಾಡಲು ನರಳಾಡುತ್ತಿದ್ದದ್ದನ್ನ ನೋಡಲು ಆಗದೇ ಆಕೆಯ ಮಗಳು ಬಾಯಿಯ ಮೂಲಕ ತಾಯಿಗೆ ಉಸಿರು ನೀಡಿದ ಮನಕಲಕುವ ಘಟನೆಯ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಈ ಘಟನೆ ನೆಡಿದ್ದು, ಫೋಟೋ ಹಾಗೂ ವಿಡಿಯೋಗಳನ್ನ ನೋಡಿ ನೆಟ್ಟಿಗರ ಕಣ್ಣಂಚು ಒದ್ದೆಯಾವಿವೆ.. ಕೆಲ ದಿನಗಳ ಇಂತಹದ್ದೇ ಒಂದು ಘಟನೆ ನಡೆದಿತ್ತು. ಪತ್ನಿಯೊಬ್ಬಳು ತನ್ನ ಪತಿಗೆ ಬಾಯಿಯ ಮೂಲಕ ಉಸಿರು ನೀಡಿ ಬದುಕಿಸಿಕೊಳ್ಳುಇವ ಪ್ರಯತ್ನ ಮಾಡಿದ್ದು, ಇದರ ಫೋಟೋಗಳು ಸಹ ವೈರಲ್ ಆಗಿದ್ದವು.