ಕೆಲಸ ಸಿಕ್ಕ ಸಂತೋಷದಲ್ಲಿ ತೇಲಾಡ್ತಿದ್ದ ಮಗಳಿಗೆ ತಂದೆ ಕೊಟ್ಟ ಕೌಂಟರ್ ನೋಡಿ ದಂಗಾದ ನೆಟ್ಟಿಗರು – VIRAL
ಮಕ್ಕಳಿಗೆ ಒಳ್ಳೆ ಕೆಲಸ ಸಿಕ್ಕಿದೆ ಅಂದ್ರೆ ಸಹಜವಾಗಿ ಪೋಷಕರು ಸಹಜವಾಗಿಯೇ ಖುಷಿ ಪಡುವ ಜೊತೆಗೆ ಹೆಮ್ಮೆ ಪಡುತ್ತಾರೆ.. ಆದ್ರೆ ಇಲ್ಲೊಬ್ಬ ಯುವತಿ ತನಗೆ ಕೆಲಸ ಸಿಕ್ಕ ಖುಷಿಯನ್ನ ಫ್ಯಾಮಿಲಿ ಗ್ರೂಪ್ ನಲ್ಲಿ ಈ ಹಂಚಿಕೊಂಡಿದ್ದಳು.. ಅಲ್ಲದೇ ನಿಮ್ಮಲ್ಲರ ಬೆಂಬಲವಿಲ್ಲದೇ ಇದು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದರು.. ಇದಕ್ಕೆ ಸಖತ್ ಕೌಂಟರ್ ನೀಡಿರುವ ಆಕೆಯ ತಂದೆ ರಿಲ್ಯಾಕ್ಸ್ ನೇಹಾ, ಕೆಲಸ ಸಿಕ್ಕಿದೆ ಅಷ್ಟೇ. ನೀನೇನು ಆಸ್ಕರ್ ಪ್ರಶಸ್ತಿಯನ್ನ ಗೆದ್ದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯ ಈ ಚಾಟಿಂಗ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. ಕೆನಡಾದ ಟೊರ್ನೊಟೋ ನಿವಾಸಿಯಾಗಿರುವ ನೇಹಾ ಫ್ಯಾಮಿಲಿ ಗ್ರೂಪ್ನ ಸ್ಕ್ರೀನ್ಶಾಟ್ನ್ನು ಶೇರ್ ಮಾಡಿದ್ದಾರೆ. ಹೊಸ ಕೆಲಸ ಸಿಕ್ಕಿದೆ ಎಂದು ತಂದೆಗೆ ಹೇಳಿದ್ದೆ, ಅವರ ಪ್ರತಿಕ್ರಿಯೆ ಹೀಗಿರಬಹುದೇ..? ಎಂದು ಆಕೆ ಈ ಸ್ಕ್ರೀನ್ಶಾಟ್ಗೆ ಶೀರ್ಷಿಕೆ ನೀಡಿದ್ದಾಳೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.