ವಿರಾಟ್ ಅಹಂ ಹೆಚ್ಚು.. ರೋಹಿತ್ ಗೆ ಫಿಟ್ ನೆಸ್ ಇಲ್ಲ.. Virat saaksha tv
ದೇಶ ವಿದೇಶಗಳಲ್ಲಿ ಗೆಲುವಿನ ಕೇಕೆ ಹಾಕುತ್ತಿರುವ ಟೀಂ ಇಂಡಿಯಾ, ಕಳೆದ 29 ವರ್ಷಗಳಲ್ಲಿ ಒಂದೂ ಬಾರಿಯೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಒಂದೇ ಒಂದು ಸರಣಿ ಗೆದ್ದಿಲ್ಲ. ಹೀಗಾಗಿ ಈ ಬಾರಿ ವಿರಾಟ್ ನೇತೃತ್ವದ ಟೆಸ್ಟ್ ತಂಡ ಆಫ್ರಿಕಾ ನಾಡಲ್ಲಿ ಇತಿಹಾಸ ನಿರ್ಮಿಸಲಿದೆ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು. ಆದರೇ ಟೆಸ್ಟ್ ಸರಣಿಗೆ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ನೂತನ ಉಪನಾಯಕ ರೋಹಿತ್ ಶರ್ಮಾ ಅಲಭ್ಯವಾಗಿರುವುದು ಅಭಿಮಾನಿಗಳಲ್ಲಿ ನಿರಾಸೆಯನ್ನುಂಟು ಮಾಡಿದೆ.
ಹೀಗಾಗಿ ಈ ಬಾರಿ ಕೂಡ ಆಫ್ರಿಕಾ ನೆಲದಲ್ಲಿ ಸರಣಿ ಗೆಲ್ಲುವ ಕನಸು ಕನಸಾಗಿಯೇ ಉಳಿದುಬಿಡುತ್ತೇನೋ ಅನ್ನೋ ಆತಂಕ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದು ಟೆಸ್ಟ್ ಸಂಗತಿಯಾದರೇ ಏಕದಿನ ನಾಯಕತ್ವದಿಂದ ವಜಾಗೊಳಿಸಿರುವುದರಿಂದ ಬೇಸರಗೊಂಡಿರುವ ವಿರಾಟ್ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಅನ್ನೋ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ತನ್ನ ಮಗಳ ಬರ್ತ್ ಡೇ ಅಂಗವಾಗಿ ವಿರಾಟ್ ಕೊಹ್ಲಿ ಫ್ಯಾಮಿಲಿ ಟ್ರಿಪ್ ಪ್ಲಾನ್ ಮಾಡಿಕೊಂಡಿದ್ದಾರಂತೆ. ಹೀಗಾಗಿ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಕ್ರೀಡಾಭಿಮಾನಿಗಳನ್ನು ಮತ್ತಷ್ಟು ನಿರಾಸೆಗೊಳಿಸಿದೆ.
ಈ ನೇಪಥ್ಯದಲ್ಲಿ ವಿರಾಟ್ ಕೊಹ್ಲಿ, ಮತ್ತು ರೋಹಿತ್ ಶರ್ಮಾ ವಿರುದ್ಧ ಕ್ರೀಡಾಭಿಮಾನಿಗಳು ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ತಮ್ಮ ತಮ್ಮ ಅಹಂನಿಂದಾಗಿ ಆಟಕ್ಕೆ ಕಳಂಕ ತರುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ರೋಹಿತ್ ಟೆಸ್ಟ್ ಸರಣಿಯಿಂದ ದೂರ.. ಮಗಳ ಬರ್ತ್ ಡೇ ಕಾರಣ ವಿರಾಟ್ ಏಕದಿನ ಸರಣಿಯಿಂದ ದೂರ.. ವ್ಹಾ ಒಳ್ಳೆ ಸಿನಿಮಾ ಸ್ಕ್ರೀಪ್ಟ್. ನಿಜಕ್ಕೂ ಬಿಸಿಸಿಐಗೆ ಅವಾರ್ಡ್ ಕೊಡಲೇಬೇಕು ಎಂದು ಕಿಡಿಕಾರುತ್ತಿದ್ದಾರೆ.
ಇನ್ನು ಕೆಲವರು ನಾಯಕತ್ವ ಕಳೆದುಕೊಂಡಿರುವ ಕೊಹ್ಲಿ ನಿರಾಸೆಗೊಂಡಿರುವುದು ಸಹಜ, ಆದ್ರೆ ಕೇವಲ ನಾಯಕತ್ವ ಇಲ್ಲ ಎಂಬ ಕಾರಣಕ್ಕೆ ಸರಣಿಯಿಂದ ದೂರ ಉಳಿಯೋದು ಸರಿಯಲ್ಲ. ಈ ವಿಷಯದಲ್ಲಿ ವಿರಾಟ್ ಅವರನ್ನ ಬೆಂಬಲಿಸಲು ಆಗುವುದಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದಲ್ಲದೇ ರೋಹಿತ್ ಶರ್ಮಾಗೆ ಫುಟ್ ನೆಸ್ ಇಲ್ಲ. ವಿರಾಟ್ ಗೆ ಇಗೋ.. ಈ ಇಬ್ಬರು ಒಬ್ಬರ ನಾಯಕತ್ವದಲ್ಲಿ ಒಬ್ಬರು ಆಡುವುದಿಲ್ಲವೇನೋ..? ಇವರಿಗೆ ತಂಡಕ್ಕಿಂತ ಅಹಂ ಮುಖ್ಯವಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.