1205 ದಿನಗಳು 41 ಇನ್ನಿಂಗ್ಸ್ ಗಳ ಬಳಿಕ ಟೆಸ್ಟ್ ನಲ್ಲಿ ಶತಕ ಸಿಡಿಸಿದ ಕಿಂಗ್ ಕೊಹ್ಲಿ….
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 394 ರನ್ ಗಳಿಸಿದೆ. ಊಟದ ನಂತರ ವಿರಾಟ್ ಕೊಹ್ಲಿ (100 ರನ್) ಮತ್ತು ಅಕ್ಷರ್ ಪಟೇಲ್ (0 ರನ್) ಕ್ರೀಸ್‌ನಲ್ಲಿದ್ದಾರೆ.
ಕೊಹ್ಲಿ 1205 ದಿನಗಳು, 23 ಪಂದ್ಯಗಳು ಮತ್ತು 41 ಇನ್ನಿಂಗ್ಸ್‌ಗಳ ನಂತರ ಟೆಸ್ಟ್‌ನಲ್ಲಿ ಶತಕ ಗಳಿಸಿದ್ದಾರೆ. 2019 ರ ನವೆಂಬರ್ 23 ರಂದು ಬಾಂಗ್ಲಾದೇಶ ವಿರುದ್ಧ ಕೊಹ್ಲಿ ಕೊನೆಯ ಬಾರಿಗೆ ತಮ್ಮ 27 ನೇ ಟೆಸ್ಟ್ ಶತಕವನ್ನು ಗಳಿಸಿದರು. ಇದು ಅವರ 28ನೇ ಟೆಸ್ಟ್ ಶತಕವಾಗಿದೆ. ಕೊಹ್ಲಿ ಹೆಸರಿನಲ್ಲಿ ಇದೀಗ 75 ಅಂತಾರಾಷ್ಟ್ರೀಯ ಶತಕಗಳಿವೆ. ಟೆಸ್ಟ್‌ನಲ್ಲಿ 28, ಏಕದಿನದಲ್ಲಿ 46 ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಶತಕ ಗಳಿಸಿದ್ದಾರೆ.
ಶ್ರೀಕರ್ ಭರತ್ 44 ರನ್ ಗಳಿಸಿ ಔಟಾದರು. ಪೀಟರ್ ಹ್ಯಾಂಡ್ಸ್‌ಕಾಂಬ್ ಕ್ಯಾಚಿತ್ತು ನಾಥನ್ ಲಿಯಾನ್ ಬೌಲಿಂಗ್ ನಲ್ಲಿ ಔಟ್ ಆಗಿದ್ದಾರೆ. ಭರತ್ ಕೊಹ್ಲಿ ಜೊತೆ 84 ರನ್ ಜೊತೆಯಾಟ ನಡೆಸಿದರು. ಇದಕ್ಕೂ ಮುನ್ನ ರವೀಂದ್ರ ಜಡೇಜಾ 23 ರನ್ ಗಳಿಸಿ ಔಟಾದರು. ಜಡೇಜಾ 170 ಎಸೆತಗಳಲ್ಲಿ ಕೊಹ್ಲಿ ಜೊತೆ 64 ರನ್ ಜೊತೆಯಾಟ ನಡೆಸಿದರು.
Virat Kohli: After 1205 days and 41 innings, King Kohli scored a century in Tests.