ಕೊಹ್ಲಿ ಚಾಂಪಿಯನ್ ಆಟಗಾರ; ಶೀಘ್ರದಲ್ಲೇ ಬಿಗ್ ಇನ್ನಿಂಗ್ಸ್ ಆಡಲಿದ್ದಾರೆ – ರಿಕಿ ಪಾಟಿಂಗ್…
ಭಾರತದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನವಿದ್ದಂತೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿಕೆ ನೀಡಿದ್ದರು. ಅದೇ ರೀತಿ ಇಡೀ ಸರಣಿಯಲ್ಲಿ ಸ್ಪಿನ್ನರ್ ಗಳು ಮಾತ್ರ ಪ್ರಾಬಲ್ಯ ಮೆರೆದಿದ್ದು ರನ್ ಗಳಿಸಲು ಬ್ಯಾಟರ್ ಗಳು ಪರದಾಡಿದರು. ಉಳಿದ ಬ್ಯಾಟ್ಸ್ ಮನ್ ಗಳಂತೆ ವಿರಾಟ್ ಕೊಹ್ಲಿ ಸಹ ರನ್ ಗಳಿಸಲು ಹರಸಾಹಸ ಪಟ್ಟರು. ಕೊಹ್ಲಿ ಕಳೆದ ಹಲವು ಇನ್ನಿಂಗ್ಸ್ ಗಳಿಂದ ಬಿಗ್ ಇನ್ನಿಂಗ್ಸ್ ಆಡಲು ಕಷ್ಟ ಪಡುತ್ತಿದ್ದಾರೆ. ರನ್ ಗಳಿಸಲು ತಿಣುಕಾಡುತ್ತಿದ್ದಾರೆ. ಆದರೇ ವಿರಾಟ್ ಕೋಹ್ಲಿ ಚಾಂಪಿಯನ್ ಆಟಗಾರನಾಗಿದ್ದು ಶೀಘ್ರದಲ್ಲೇ ಟೆಸ್ಟ್ ನಲ್ಲಿ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಎಂದು ರಿಕಿಪಾಟಿಂಗ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.
ಕೊಹ್ಲಿಗೂ ಸತ್ಯ ಗೊತ್ತಿದೆ….
ಐಸಿಸಿ ರೀವ್ಯೂ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಂಟಿಂಗ್ “ ಅವನು ಚಾಂಪಿಯನ್ ಆಟಗಾರ ಎಂದು ಕೊಹ್ಲಿ ಕುರಿತು ಯಾವಾಗಲೂ ಹೇಳಿದ್ದೇನೆ. ಅವನು ಯಾವಗಲೂ ಕಷ್ಟಗಳಿರುವ ದಾರಿಯಲ್ಲಿ ಮುಂದುವರೆಯಲು ಬಯಸುತ್ತಾನೆ. ಇದೀಗ ಅವನ ಬ್ಯಾಟ್ ನಿಂದ್ ರನ್ ಗಳು ಬರುತ್ತಿಲ್ಲ. ನಾವೆಲ್ಲರೂ ಸಹ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದೇವೆ. ಆದರೇ ಈ ಸತ್ಯ ಕೊಹ್ಲಿಗೂ ತಿಳಿದಿದೆ.
ನಿಮ್ಮ ಬ್ಯಾಟ್ಸ್‌ಮನ್ ನಿಮ್ಮ ಬ್ಯಾಟ್ ನಿಂದ ರನ್ ಬರದಿದ್ದರೇ ಏನೋ ತಪ್ಪಾಗಿದೆ ಎಂದು ನಿಮ್ಮಲ್ಲೇ ಅರಿತುಕೊಳ್ಳಲು ಪ್ರಾರಂಭಿಸುತ್ತೀರಿ.. ಅದರಂತೆ ಕೊಹ್ಲಿ ಮತ್ತೆ ಪುಟಿದೇಳುತ್ತಾರೆ ಮತ್ತು ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಅದರ ನಾನು ಅದರ ಬಗ್ಗೆ ಸ್ವಲ್ಪವೂ ಚಿಂತಿಸುವುದಿಲ್ಲ ಎಂದು ಪಾಟಿಂಗ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ.
14 ಇನ್ನಿಂಗ್ಸ್‌ಗಳಿಂದ ಅರ್ಧಶತಕ ದಾಖಲಾಗಿಲ್ಲ..
ವಿರಾಟ್ ಕೋಹ್ಲಿ ಕಳೆದ 14 ಟೆಸ್ಟ್ ಇನ್ನಿಂಗ್ಸ್ ಗಳಿಂದ ಅರ್ದಶತಕ ಗಳಿಸಲು ಸಾಧ್ಯವಾಗಿಲ್ಲ. 11 ಜನವರಿ 2022 ರಂದು ದಕ್ಷಿಣ ಆಫ್ರಿಕಾದಲ್ಲಿ ಕೊನೆಯ ಬಾರಿಗೆ 79 ರನ್ ಗಳಿಸಿದ್ದೇ ಇಲ್ಲಿಯವರೆಗಿನ ದೊಡ್ಡ ಮೊತ್ತ. ಆ ನಂತರ ಕೊಹ್ಲಿಯ ಅತಿಹೆಚ್ಚು ಸ್ಕೋರ್ 45 ರನ್ ಮಾತ್ರ. ಕಳೆದ 25 ರನ್ ಗಳ ಗಡಿಯನ್ನ ಕೇವಲ ಎರಡು ಭಾರಿ ದಾಟಿದ್ದಾರೆ. ಕಳೆದ 12 ಇನ್ನಿಂಗ್ಸ್ ಗಳಲ್ಲಿ 25 ಕ್ಕಿಂತ ಕಡಿಮೆ ರನ್ ಗಳಿಸಿದ್ದಾರೆ. ಹಾಗೇ ನೋಡಿದರೆ ಇದು ಕೆಲ್ ಎಲ್ ರಾಹುಲ್ ಸರಾಸರಿಗಿಂತಲೂ ಕಡಿಮೆ.
ಬಾರ್ಡರ್-ಗಾವಸ್ಕರ್ ಸರಣಿಯಲ್ಲೂ ವಿಫಲ …
ಇನ್ನೂ ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಸಾಧನೆ ಹೇಳಿಕೊಳ್ಳುವಂತಿಲ್ಲ. ಕಳೆದ 3 ಟೆಸ್ಟ್ ಗಳ 5 ಇನ್ನಿಂಗ್ಸ್ ಗಳಿಂದ 12, 20, 44, 13 ಮತ್ತು 22 ರನ್ ಗಳಿಸಲಷ್ಟೆ ಶಕ್ತರಾಗಿದ್ದಾರೆ. ಮೊದಲೇ ಬ್ಯಾಟ್ಸ್ ಮನ್ ಗಳಿಗೆ ದುಃಸ್ವಪ್ನವಾಗಿರುವ ಪಿಚ್ ನಲ್ಲಿ ವಿರಾಟ್ ಅದೃಷ್ಟವೂ ಪದೇ ಪದೇ ಕೈ ಕೊಡುತ್ತಿದೆ.
ಆಸ್ಟ್ರೇಲಿಯಾ ಪುನರಾಗಮನ
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಮೊದಲ 2 ಟೆಸ್ಟ್‌ಗಳಲ್ಲಿ ಸೋತ ನಂತರ ಆಸ್ಟ್ರೇಲಿಯಾ ಮತ್ತೆ ಕಂಬ್ಯಾಕ್ ಮಾಡಿದೆ. ಇಂದೋರ್‌ನಲ್ಲಿ ಗುರುವಾರ ನಡೆದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಭಾರತ ನೀಡಿದ 76 ರನ್ ಗಳ ಗುರಿಯನ್ನ 76 ನಿಮಿಷದಲ್ಲೇ ಸಾಧಿಸಿ ಗೆದ್ದು ಬೀಗಿತು. ಸರಣಿಯ ಕೊನೆಯ ಪಂದ್ಯ ಮಾರ್ಚ್ 9 ರಿಂದ 13 ರವರೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
Virat kohli champion player; Will play big innings soon – Ricky Potting…