ವಿರಾಟ್ ಕೊಹ್ಲಿ ಮಹಾ ಪ್ರೆಸ್ ಮೀಟ್.. ಕ್ರಿಕೆಟ್ ಗೆ ಗುಡ್ ಬೈ..? Virat Kohli saaksha tv
ಏಕದಿನ ನಾಯಕತ್ವದಿಂದ ವಜಾಗೊಂಡ ಬಳಿಕ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಪ್ರೆಸ್ ಮೀಟ್ ನಡೆಸಲಿದ್ದಾರೆ.
ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರನ್ನು ವಜಾಗೊಳಿಸಿ ರೋಹಿತ್ ಶರ್ಮಾಗೆ ನಾಯಕತ್ವ ವಹಿಸಿದೆ. ಏಕದಿನ ನಾಯಕತ್ವದಲ್ಲಿ ಮುಂದುವರೆಯುದಾಗಿ ವಿರಾಟ್ ಹೇಳಿದ್ದರೂ, ಬಿಸಿಸಿಐ ಕೊಹ್ಲಿಯನ್ನ ನಾಯಕತ್ವದಿಂದ ಕೆಳಗಿಳಿಸಿದೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಮಧ್ಯೆ ವಿರಾಟ್ ಮತ್ತು ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯಗಳಿದ್ದು, ಇಬ್ಬರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ದೂರ ಇದ್ದರೇ ವಿರಾಟ್ ಏಕದಿನ ಸರಣಿಗೆ ಗೈರಾಗಲು ಚಿಂತನೆ ಯಲ್ಲಿದ್ದಾರಂತೆ.
ಇದು ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಸಾರಿ ಹೇಳುತ್ತಿದೆ. ಈ ಮಧ್ಯೆ ನಾಳೆ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಗೆ ಪಯಾಣ ಬೆಳಸಲಿದ್ದು, ಇದರ ಭಾಗವಾಗಿ ವಿರಾಟ್ ಇಂದು ಪ್ರೆಸ್ ಮೀಟ್ ನಡೆಸಲಿದ್ದಾರೆ. ನಾಯಕತ್ವ ಬದಲಾವಣೆ ಬಳಿಕ ಮೌನ ವಹಿಸಿದ್ದ ವಿರಾಟ್ ಇದೀಗ ಪ್ರೆಸ್ ಮೀಟ್ ಕರೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಟೆಸ್ಟ್, ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಟೆಸ್ಟ್ ತಂಡವನ್ನು ವಿರಾಟ್ ಮುನ್ನಡೆಸುತ್ತಿದ್ದರೇ ಏಕದಿನ ತಂಡವನ್ನು ರೋಹಿತ್ ಮುನ್ನಡೆಸಲಿದ್ದಾರೆ. ಆದ್ರೆ ರೋಹಿತ್ ಗಾಯಗೊಂಡಿರುವ ಕಾರಣ, ಏಕದಿನ ಸರಣಿಗೆ ಲಭ್ಯರಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಈ ಮಧ್ಯೆ ವಿರಾಟ್ ಕೂಡ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇಂದಿನ ಪ್ರೆಸ್ ಮೀಟ್ ನಲ್ಲಿ ಅದಕ್ಕೆ ಉತ್ತರ ಸಿಗಲಿದೆ.
ಇದಲ್ಲದೇ ವಿರಾಟ್ ಕೊಹ್ಲಿ ಟಿ 20 ಮತ್ತು ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳುವ ಸಾಧ್ಯತೆಗಳಿವೆ ಎಂದು ಕೂಡ ಹೇಳಲಾಗುತ್ತಿದೆ. ಉತ್ತಮ ದಾಖಲೆ ಹೊಂದಿದ್ದರೂ ಅವರನ್ನ ನಾಯಕತ್ವದಿಂದ ವಜಾಗೊಳಿಸಿದ್ದಕ್ಕೆ ವಿರಾಟ್ ಬೇಸರಗೊಂಡಿದ್ದು, ಸೀಮಿತ ಓವರ್ ಗಳ ಕ್ರಿಕೆಟ್ ಗೆ ಬೈ ಬೈ ಹೇಳುವ ಸಾಧ್ಯತೆಗಳಿವೆ.