“ನನಗೆ ಯಾವುದೇ ನಷ್ಟವಿಲ್ಲ”.. ಪ್ರೆಸ್ ಮೀಟ್ ನಲ್ಲಿ ಕೊಹ್ಲಿ ಗರಂ virat kohli saaksha tv
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿ ಬಗ್ಗೆ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ. ಮಂಗಳವಾರ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ದೂರ ಸರಿಯಲಿದ್ದಾರೆ ಎಂದು ವರದಿಗಳು ಪ್ರಕಟವಾಗಿದ್ದವು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ವಿರಾಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಗಳು ನಡೆದವು. ಇದೀಗ ಬಗ್ಗೆ ಸ್ವತಃ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ವಿರಾಟ್, ನಾನು ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದೇನೆ. ನನಗೆ ವಿಶ್ರಾಂತಿ ಬೇಕೆಂದು ಬಿಸಿಸಿಐ ಬಳಿ ಮನವಿ ಮಾಡಿಕೊಂಡಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಶುದ್ಧಸುಳ್ಳು. ಆಯ್ಕೆ ಸಮಿತಿ ಏಕದಿನ ನಾಯಕತ್ವದಿಂದ ವಜಾ ಮಾಡಿದೆ ಅಷ್ಟೆ. ಏಕದಿನ ಕ್ರಿಕೆಟ್ ಗೆ ನಾನು ದೂರ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಹರಡಿಸುವನ್ನ ಇಲ್ಲಿಗೆ ನಿಲ್ಲಿಸಿ ಎಂದ ಕೊಹ್ಲಿ ಗರಂ ಆದರು.
ನಾಯಕತ್ವದಿಂದ ವಜಾಗೊಳಿಸಿದಕ್ಕೆ ನನಗೆ ದೊಡ್ಡದಾಗಿ ಯಾವುದೇ ನಷ್ಟವಿಲ್ಲ. ಒತ್ತಡ ವಿಲ್ಲದೇ ಕೇವಲ ಒಬ್ಬ ಬ್ಯಾಟರ್ ಆಗಿ ಮಿಂಚುವ ಅವಕಾಶ ಸಿಕ್ಕಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡದ ಪರ ಆಡುವುದು ನನಗೆ ಇಷ್ಟ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಏಕದಿನ ಕ್ರಿಕೆಟ್ ಆಡಲು ಎಷ್ಟೋ ಉತ್ಸಾಹದಿಂದ ಇದ್ದೇನೆ ಎಂದು ವಿರಾಟ್ ತಿಳಿಸಿದರು.