Virat Kohli | ದಾಖಲೆಗಳ ಕಿಂಗ್ ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ಮಾಜಿ ನಾಯಕ, ಸ್ಟಾರ್ ಬ್ಯಾಟರ್, ರನ್ ಮಿಷನ್ ವಿರಾಟ್ ಕೊಹ್ಲಿಗೆ ದಾಖಲೆಗಳು ಹೊಸದಲ್ಲ.
ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ವಿರಾಟ್ ಕೊಹ್ಲಿ ಒಂದಲ್ಲಾ ಒಂದು ದಾಖಲೆ ನಿರ್ಮಾಣ ಆಗುತ್ತಲೇ ಇರುತ್ತದೆ.
ಕ್ರಿಕೆಟ್ ಆಟಗಾರನಾಗಿ ಸಾಕಷ್ಟು ದಾಖಲೆಗಳನ್ನು ಮಾಡಿರುವ ವಿರಾಟ್ ಕೊಹ್ಲಿ, ಕ್ರಿಕೆಟ್ ಹೊರತಾಗಿಯೂ ತಮ್ಮ ಹೆಸರಲ್ಲಿ ರೆಕಾರ್ಡ್ಸ್ ನಮೂದಿಸಿದ್ದಾರೆ.
ಅದರಂತೆ ಇದೀಗ ಸೋಶಿಯಲ್ ಮೀಡಿಯಾ ಪ್ಲಾಟ್ ಫಾಮ್ ಇನ್ ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿ ನಯಾ ದಾಖಲೆಯನ್ನು ನಿರ್ಮಿಸಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ 200 ಮಿಲಿಯನ್ ಫಾಲೋವರ್ಸ್ ಸಂಪಾದಿಸಿ, ಈ ಸಾಧನೆ ಮಾಡಿದ ಮೊದಲ ಇಂಡಿಯನ್ ಆಗಿ ಚರಿತ್ರೆ ಸೃಷ್ಠಿಸಿದ್ದಾರೆ.
ಅದೇ ರೀತಿಯಯಾಗಿ ಫೋಟೋ, ವಿಡಿಯೋ, ಬ್ಲಾಗಿಂಗ್ ಪ್ಲಾಟ್ ಫಾಮ್ ಇನ್ ಸ್ಟಾಗ್ರಾಮ್ ನಲ್ಲಿ ಅತ್ಯಧಿಕ ಮಂದಿ ಫಾಲೋವರ್ಸ್ ಇರುವ ಕ್ರೀಡಾಪಟುಗಳ ಪಟ್ಟಿಯಲ್ಲಿ ವಿಶ್ವದಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಸ್ಟಾರ್ ಫುಟ್ ಬಾಲರ್ ಕ್ರಿಸ್ಟಿಯಾನೋ ರೊನಾಲ್ಡೋ 451 ಮಿಲಿಯನ್ಸ್, ಲಿಯಾನಲ್ ಮೆಸ್ಸಿ 334 ಫಾಲೋವರ್ಸ್ ಹೊಂದಿದ್ದಾರೆ. ಇವರ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.

ಈ ಸಂಧರ್ಭವಾಗಿ ಇನ್ ಸ್ಟಾದಲ್ಲಿ ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ್ದು, 200 ಮಿಲಿಯನ್ಸ್ ಮಂದಿ..!! ನನಗೆ ಬೆಂಬಲವಾಗಿ ನಿಂತಿರುವ ಇನ್ ಸ್ಟಾಗ್ರಾಮ್ ಗೆ ಧನ್ಯವಾದಗಳು ಎಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಇದಕ್ಕೆ ಸ್ಪಂದಿಸಿರುವ ವಿರಾಟ್ ಕೊಹ್ಲಿ ಅಭಿಮಾನಿಗಳು, ಕಂಗ್ರಾಟ್ಸ್ ಕೊಹ್ಲಿ, ನಮ್ಮ ಹೃಯದದಲ್ಲಿ ನಿಮ್ಮ ಸ್ಥಾನ ಎಂದಿಗೂ ಶಾಶ್ವತವಾಗಿರುತ್ತದೆ. ನೀವು ಎಂದೆಂದಿಗೂ ಕಿಂಗ್ ಎಂದು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಅಂದಹಾಗೆ 2021 ರ ಟಿ 20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಟೀಂಇಂಡಿಯಾದ ಚುಟುಕು ಕ್ರಿಕೆಟ್ ನ ನಾಯಕತ್ವದಿಂದ ಕೆಳಗಿಳಿದಿದ್ದು ಗೊತ್ತೇ ಇದೆ. ಆ ನಂತರ ಬಿಸಿಸಿಐ ಅವರನ್ನ ಏಕದಿನ ಕ್ರಿಕೆಟ್ ನಾಯಕತ್ವದಿಂದಲೂ ವಜಾಗೊಳಿಸಿತ್ತು.
ಇನ್ನು ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿ ಟೀಂ ಇಂಡಿಯಾದ ಘನಘೋರ ಸೋಲು ಕಂಡಿತ್ತು. ಹೀಗಾಗಿ ಸೋಲಿನ ಜವಾಬ್ದಾರಿ ಹೊತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಾಯಕತ್ವದಿಂದಲೂ ಕೆಳಗಳಿದರು.
ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಸದ್ಯ ಟೀಂ ಇಂಡಿಯಾದ ನಾಯಕರಾಗಿದ್ದು, ವಿರಾಟ್ ಕೊಹ್ಲಿ ಸಾಮಾನ್ಯ ಆಟಗಾರರಾಗಿ ಟೀಂ ಇಂಡಿಯಾದಲ್ಲಿದ್ದಾರೆ.
ಕಳೆದ ಕೆಲವು ದಿನಗಳಿಂದ ಫಾರ್ಮ್ ಕೊರತೆ ಎದುರಿಸುತ್ತಿರುವ ವಿರಾಟ್ ಕೊಹ್ಲಿ, ತನ್ನ ಸ್ಥಾನಕ್ಕೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ. ಆದ್ರೂ ವಿರಾಟ್ ಕೊಹ್ಲಿ ಕ್ರೇಜ್ ಮಾತ್ರ ಕಡಿಮೆಯಾಗುತ್ತಿಲ್ಲ.
ಇನ್ನು ಇನ್ ಸ್ಟಾಗ್ರಾಮ್ ನಲ್ಲಿ 177 ಮಿಲಿಯನ್ ಫಾಲೋವರ್ಸ್ ಇದ್ದಾ ಸಂದರ್ಭದಲ್ಲಿ ಕೊಹ್ಲಿಯ ಒಂದು ಪೋಸ್ಟ್ ಗೆ ಐದು ಕೋಟಿ ರುಪಾಯಿಗಳನ್ನು ಪಡೆಯುತ್ತಿದ್ದರು ಎಂದು ವಿಶ್ಲೇಷಕರು ಅಂದಾಜಿಸಿದ್ದರು.








