Virat Kohli | ವಿರಾಟ್ ಅನ್ನೋದು ಹೆಸರಲ್ಲ ಬ್ರ್ಯಾಂಡ್
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ತೊರೆದ್ರೂ ಅವರ ಕ್ರೇಜ್ ಮಾತ್ರ ಬಂಗಾರದ ಬೆಲೆಯಂತೆ ಹೆಚ್ಚಾಗುತ್ತಲೇ ಇದೆ.
ಕಳೆದ ಎರಡು ವರ್ಷಗಳಿಂದ ವಿರಾಟ್ ಬ್ಯಾಟ್ ಸದ್ದು ಮಾಡಿದ್ರೂ ಸೆಂಚೂರಿ ಸಿಡಿಸಿಲ್ಲ. ಟೆಸ್ಟ್, ಏಕದಿನ, ಟಿ 20 ಹೀಗೆ ಎಲ್ಲಾ ಮಾದರಿಯಲ್ಲಿ ಅರ್ಧಶತಕಕ್ಕೆ ಸುಸ್ತಾಗುತ್ತಿರುವ ವಿರಾಟ್ ಹವಾ ಮಾತ್ರ ಎಲ್ಲೂ ಕಡಿಮೆ ಆಗುತ್ತಲೇ ಇಲ್ಲ.
ಯಾಕಂದರೆ ವಿರಾಟ್ ಕೊಹ್ಲಿ ಅನ್ನೋದು ಕೇವಲ ಒಂದು ಕ್ರಿಕೆಟ್ ಆಟಗಾರನ ಹೆಸರಲ್ಲ. ಬದಲಿಗೆ ಅದೊಂದು ಬ್ಯ್ರಾಂಡ್..!!!
ವಿಶ್ವ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಗಿಂತ ಅದ್ಭುತ ಪ್ರತಿಭೆ ಇರುವ ಆಟಗಾರರನ್ನ ಎಲ್ಲರೂ ನೋಡಿದ್ದಾರೆ. ಆದ್ರೆ ವಿರಾಟ್ ಕೊಹ್ಲಿಯಂತಹ ರನ್ ರಾಕ್ಷಸನನ್ನ ಮಾತ್ರ ಈ ವರೆಗೂ ಕ್ರಿಕೆಟ್ ಜಗತ್ತು ನೋಡಿರಲಿಲ್ಲ.
ಯಾಕಂದರೇ ವಿರಾಟ್ ಕೊಹ್ಲಿ ಒನ್ ಅಂಡ್ ಓನ್ಲಿ ಮಾಸ್ಟರ್ ಪೀಸ್..!!
ಮೂರು ಮಾದರಿಯ ಕ್ರಿಕೆಟ್ನಲ್ಲಿ ಸುಲ್ತಾನಂತೆ ಬ್ಯಾಟ್ ಬೀಸುವ ವಿರಾಟ್ ಕೊಹ್ಲಿ, ಕ್ರಿಕೆಟ್ ಇತಿಹಾಸದ ಪುಸ್ತಕದಲ್ಲಿ ತಮ್ಮದೇಯಾದ ಪೇಜ್ ಸೃಷ್ಟಿ ಮಾಡಿಕೊಂಡಿದ್ದಾರೆ.
ಆ ಪುಟದಲ್ಲಿ ವಿರಾಟ್ ವೀರಾವೇಶ, ವಿರಾಟ್ ಉಗ್ರರೂಪ, ಕ್ರಿಕೆಟ್ ಕಿಂಕರನಾಗಿ ಕೊಹ್ಲಿಯ ರೌದ್ರವತಾರ, ಹೀಗೆ ಎಲ್ಲವೂ ಸೇರಿವೆ. ಒಂದು ಮಾತಿನಲ್ಲಿ ಹೇಳೋದ್ರಾದ್ರೆ ಈ ವಿರಾಟ್ ಈ ಶತಮಾನದ ಕ್ರಿಕೆಟ್ ದೇವರು..
ಹೀಗಾಗಿಯೇ ವಿರಾಟ್ ಕೊಹ್ಲಿ ಅನ್ನೋದು ಈಗ ಕೇವಲ ಒಂದು ಹೆಸರಾಗಿರದೇ ಒಂದು ಬ್ಯ್ರಾಂಡ್ ಆಗಿದೆ. ಅದಕ್ಕೆ ತಾಜಾ ಉದಾಹರಣೆ ವಿರಾಟ್ ಕೊಹ್ಲಿಯ ಬ್ರ್ಯಾಂಡ್ ವ್ಯಾಲ್ಯೂ..!!!
ಹೌದು..! ಸದ್ಯ ಇಂಡಿಯಲ್ ಪ್ರಿಮಿಯರ್ ಲೀಗ್ ನಲ್ಲಿ ಆರ್ ಸಿಬಿ ಅಬ್ಬರಿಸುತ್ತಿರುವ ವಿರಾಟ್ ಕೊಹ್ಲಿ ಇದೀಗ ಅಪರೂಪದ ಸಾಧನೆ ಮಾಡಿದ್ದಾರೆ. ಸತತ ಐದನೇ ವರ್ಷ, ಇಂಡಿಯಾಸ್ ಮೋಸ್ಟ್ ವಾಲ್ಯೂಬಲ್ ಸೆಲೆಬ್ರಿಟಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
2020 ಕ್ಕೆ ಹೋಲಿಸಿದರೆ ಈ ವರ್ಷ ಕೊಹ್ಲಿ ಬ್ರ್ಯಾಂಡ್ ಮೌಲ್ಯ ತಗ್ಗಿದೆ. ಆದ್ರೂ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿ ಮುಂದುವರೆದಿದ್ದಾರೆ.
200ರಲ್ಲಿ ವಿರಾಟ್ ಬ್ರ್ಯಾಂಡ್ ಮೌಲ್ಯ 237.7 ಮಿಲಿಯನ್ ಡಾಲರ್ ಇತ್ತು. ಈ ವರ್ಷ 185.7 ಮಿಲಿಯನ್ಗೆ ಕುಸಿದಿದೆ. ಈ ಸಾಲಿನಲ್ಲಿ ಬಾಲಿವುಡ್ ಸ್ಟಾರ್ ಹೀರೋಗಳಾದ ರಣವೀರ್ ಸಿಂಗ್ ಮತ್ತು ಅಕ್ಷಯ್ ಕುಮಾರ್ ಅವರನ್ನು ಹಿಂದಿಕ್ಕಿ ವಿರಾಟ್ ಟಾಪ್ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 61.2 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
2020 ಕ್ಕೆ ಹೋಲಿಸಿದರೆ ಧೋನಿಯ ಬ್ರಾಂಡ್ ಮೌಲ್ಯವು ಗಮನಾರ್ಹವಾಗಿ ಹೆಚ್ಚಾಗಿದೆ.
ಐಪಿಎಲ್ ಹೊರತುಪಡಿಸಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳದಿದ್ದರೂ, ಧೋನಿ ಇನ್ನೂ 25 ಬ್ರಾಂಡ್ಗಳಿಗೆ ರಾಯಭಾರಿಯಾಗಿದ್ದಾರೆ. ಸ್ಟಾರ್ ಶಟ್ಲರ್ ಪಿವಿ ಸಿಂಧು ಈ ಪಟ್ಟಿಯಲ್ಲಿ ಮೊದಲ ಬಾರಿಗೆ ಟಾಪ್ 20 ರೊಳಗೆ ಕಾಣಿಸಿಕೊಂಡಿದ್ದಾರೆ.