ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೂ ವಿರಾಟ್ ವಿದಾಯ..
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೂ ವಿದಾಯ ಘೋಷಿಸಿದ್ದಾರೆ.
ಕಳೆದ ವರ್ಷ ಏಕದಿನ, ಟಿ 20 ಕ್ರಿಕೆಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದ ವಿರಾಟ್ ಈಗ ಟೆಸ್ಟ್ ನಾಯಕತ್ವಕ್ಕೂ ವಿದಾಯ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿರಾಟ್, ಸಹಕಾರ, ಹೊಣೆಗಾರಿಕೆ ನೀಡಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಜೊತೆಗೆ ಬಿಸಿಸಿಐಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನು ಟೀಂ ಇಂಡಿಯಾದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿಗೂ ಕೂಡ ಧನ್ಯವಾದ ತಿಳಿಸಿದ್ದಾರೆ.
ಪ್ರಮುಖವಾಗಿ ಎಂ.ಎಸ್.ಧೋನಿಗೆ ಥ್ಯಾಂಕ್ಸ್ ಹೇಳಿರುವ ವಿರಾಟ್, ಇನ್ಮುಂದೆ ಆಟಗಾರನಾಗಿ ತಂಡದ ಪರ ಆಡುವುದಾಗಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಆರವತ್ತು ಪಂದ್ಯಗಳಲ್ಲಿ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದು, 40 ರಲ್ಲಿ ಜಯ ಸಾಧಿಸಿದೆ. ಭಾರತದ ಪರ ಅತ್ಯಂತ ಯಶಸ್ವಿ ನಾಯಕರಾಗಿ ವಿರಾಟ್ ದಾಖಲೆ ಬರೆದಿದ್ದಾರೆ.