Virat Kohli | ಕೊಹ್ಲಿಯನ್ನ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ
ವಿರಾಟ್ ಕೊಹ್ಲಿ ರನ್ ಗಳಿಸುತ್ತಿದ್ದಾಗ ಒಂದರ ಹಿಂದೆ ಒಂದು ಸೆಂಚೂರಿ ಬಾರಿಸುತ್ತಿದ್ದಾಗ ಈ ರೀತಿ ಆಡಬೇಕು.. ಆ ರೀತಿ ಆಡಬೇಕು ಎಂದು ಯಾರು ಹೇಳಿಲ್ಲ ಅಲ್ಲವಾ..? ಮತ್ತೆ ಈಗ ಯಾಕೆ ತಂಡದಲ್ಲಿ ಅವರ ಸ್ಥಾನವನ್ನು ಪ್ರಶ್ನಿಸುತ್ತಿದ್ದಾರೆ.
ನಿಜ ಹೇಳಬೇಕೆಂದ್ರೆ ನಮಗೆ ಕೊಹ್ಲಿಯನ್ನ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಟೀಂ ಇಂಡಿಯಾದ ಆಟಗಾರ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ವಿರಾಟ್ ಕೊಹ್ಲಿ ಬ್ಯಾಟ್ ಫಾರ್ಮ್ ಗೆ ಸಿಲುಕಿ ಒದ್ದಾಡುತ್ತಿರೋದು ಗೊತ್ತಿರುವ ವಿಚಾರವೇ.
ಹೀಗಾಗಿ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ರಂತಹ ಆಟಗಾರರು ಕೂಡ ವಿರಾಟ್ ಕೊಹ್ಲಿ ಅವರನ್ನ ತಂಡದಿಂದ ಕೈಬಿಡಬೇಕು ಎಂದು ಹೇಳಿಕೆ ನೀಡಿದ್ದಾರೆ.
ಆದ್ರೆ ಸುನೀಲ್ ಗವಾಸ್ಕರ್, ರೋಹಿತ್ ಶರ್ಮಾ, ವಿದೇಶಿ ಕ್ರಿಕೆಟ್ ಆಟಗಾರರು ಕೊಹ್ಲಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇದೀಗ ಈ ಸಾಲಿಗೆ ಕನ್ನಡಿಗ ರಾಬಿನ್ ಉತ್ತಪ್ಪ ಸೇರಿಕೊಂಡಿದ್ದಾರೆ.
ಸದ್ಯದ ಕೊಹ್ಲಿ ಪ್ರದರ್ಶನದ ಬಗ್ಗೆ ಮಾತನಾಡಿರುವ ರಾಬಿನ್ ಉತ್ತಪ್ಪ, ಕೊಹ್ಲಿ ಈಗಾಗಲೇ 70 ಸೆಂಚೂರಿಗಳನ್ನು ಸಾಧಿಸಿದ್ದಾರೆ.
ಇಂತಹ ಅದ್ಭುತ ಪ್ರತಿಭೆಯನ್ನು ಹೊಂದಿರುವ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಹೆಸರನ್ನ ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿದ್ದಾರೆ.
ಇದಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳಬೇಕು. ಈಗಲೂ ಅವರು 30 ರಿಂದ 35 ರನ್ ಗಳಿಸುತ್ತಿದ್ದಾರೆ.

ಕೆಲವು ದಿನಗಳು ಕೊಹ್ಲಿ ಅವರನ್ನ ಒಂಟಿಯಾಗಿ ಬಿಟ್ಟುಬಿಡಿ. ಅವರದ್ದೇ ಯಾದ ಶೈಲಿಯಲ್ಲಿ ಕ್ರಿಕೆಟ್ ಆಡುವುದಕ್ಕಾಗಿ ನಾವು ಕಾಯೋಣ.
ಆತನಿಗೆ ಯಾವುದು ಒಳ್ಳೆಯದ್ದೋ ಅದನ್ನ ಆತ ಮಾಡಲಿ. ತನ್ನ ಸಮಸ್ಯೆ ಏನು ಎಂಬೋದು ವಿರಾಟ್ ಕೊಹ್ಲಿಗೆ ಗೊತ್ತಿದೆ.
ಅಷ್ಟೆ ಅಲ್ಲದೇ ಅದರಿಂದ ಆಚೆ ಬರೋದು ಹೇಗೆ ಅನ್ನೋದು ಕೂಡ ವಿರಾಟ್ ಕೊಹ್ಲಿಗೆ ಚೆನ್ನಾಗಿ ಗೊತ್ತಿದೆ ಎಂದು ವಿರಾಟ್ ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಪದೇ ಪದೇ ವಿಶ್ರಾಂತಿ ನೀಡುತ್ತಿರುವ ಬಗ್ಗೆ ಸ್ಪಂದಿಸಿದ ರಾಬಿನ್, ಒಂದು ವೇಳೆ ವಿರಾಟ್ ಕೊಹ್ಲಿ ಬ್ರೇಕ್ ಪಡೆಯಬೇಕು ಅಂದ್ರೆ ಆತ ಖಂಡಿತವಾಗಿ ಬ್ರೇಕ್ ತೆಗೆದುಕೊಳ್ಳುತ್ತಾನೆ.
ಇಲ್ಲವಾದಲ್ಲಿ ಒಂದು ಸಿರೀಸ್ ನಲ್ಲಿ ಆಡಬೇಕು ಅಂದ್ರೆ ಆ ಸಿರೀಸ್ ನಲ್ಲಿ ಆಡುತ್ತಾನೆ. ಅದಕ್ಕೆ ಟೀಂ ಮ್ಯಾನೇಜ್ ಮೆಂಟ್ ಒಪ್ಪಿಗೆ ಸೂಚಿಸಬೇಕು.
ಇದು ಬಿಟ್ಟರೇ ಆತನ ಸ್ಥಾನವನ್ನು ಯಾರು ಪ್ರಶ್ನಿಸುವ ಅಗತ್ಯವಿಲ್ಲ. ವಿರಾಟ್ ಕೊಹ್ಲಿ ಮ್ಯಾಚ್ ವಿನ್ನರ್. ವಿಶ್ವದಲ್ಲಿಯೇ ದಿ ಬೆಸ್ಟ್ ಮ್ಯಾಚ್ ವಿನ್ನರ್ ಅಂತಾ ಈಗಾಗಲೇ ಸಾಭೀತು ಪಡಿಸಿದ್ದಾರೆ.
ಅಂತಹ ಆಟಗಾರ ಸಾಮರ್ಥ್ಯದ ಬಗ್ಗೆ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ವಿರಾಟ್ ಕೊಹ್ಲಿಯನ್ನ ರಾಬಿನ್ ಕೊಂಡಾಡಿದ್ದಾರೆ.








