ಇಂಡಿಯಾದ ಟಿ20 ವಿಶ್ವಕಪ್ ಆಸೆಗೆ ಎಳ್ಳುನೀರು..?

1 min read
Team India saakshatv

ಇಂಡಿಯಾದ ಟಿ20 ವಿಶ್ವಕಪ್ ಆಸೆಗೆ ಎಳ್ಳುನೀರು..?

ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಸೆಮಿಫೈನಲ್ ಆಸೆ ಕೇವಲ ಲೆಕ್ಕಾಚಾರದಲ್ಲಿ ಮಾತ್ರ ನಿಂತಿದೆ. ಇಂಡಿಪೆಂಡೆಂಟ್ ಆಗಿ ಟೀಮ್ ಇಂಡಿಯಾ ಸೆಮಿಫೈನಲ್ಗೇರಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಟೀಮ್ ಇಂಡಿಯಾದ ಭವಿಷ್ಯ ಏನಿದ್ದರೂ ಉಳಿದ ತಂಡಗಳ ಮೇಲೆ ಡಿಪೆಂಡ್ ಆಗಿದೆ. ಗ್ರೂಪ್ ಹಂತದ ಎರಡು ಸೋಲು ವಿರಾಟ್ ಬಳಗ ವಿಶ್ವಕಪ್ ಎತ್ತುವ ಆಸೆಯನ್ನು ಮತ್ತಷ್ಟು ದೂರ ಮಾಡಿದೆ.

ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಿತ್ತು. ಅದರಲ್ಲಿ 10 ರನ್ಗಳ ಸೋಲು ಅನುಭವಿಸಿತ್ತು. ಅದಾದ ಮೇಲೆ ನ್ಯೂಜಿಲೆಂಡ್ ವಿರುದ್ಧ 2ನೇ ಪಂದ್ಯವನ್ನೂ ಆಡಿತ್ತು. ಆದರೆ ಅಲ್ಲೂ ಸೋಲು ಕಂಡಿತ್ತು. ಇನ್ನು ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮಿಬಿಯಾದ ವಿರುದ್ಧ ಟೀಮ್ ಇಂಡಿಯಾ ಲೀಗ್ ಪಂದ್ಯಗಳನ್ನು ಆಡಬೇಕಿದೆ. ಈ ಮೂರೂ ಪಂದ್ಯಗಳನ್ನು ಗೆದ್ದರೂ ಟೀಮ್ ಇಂಡಿಯಾದ ಸೆಮಿಫೈನಲ್ ಕನಸು ನನಸಾಗುವುದು ಕಷ್ಟ. ಯಾಕಂದರೆ ಉಳಿದ ತಂಡಗಳ ಫಲಿತಾಂಶದ ಮೇಲೆ ಟೀಮ್ ಇಂಡಿಯಾದ ಭವಿಷ್ಯ ನಿಂತಿದೆ.

Virat Kohli saaksha tv

ಸೂಪರ್ 12ರ ಗ್ರೂಪ್ 2ರಲ್ಲಿ ಪಾಕಿಸ್ತಾನ 3 ಪಂದ್ಯವನ್ನು ಆಡಿ 3ನ್ನೂ ಗೆದ್ದು 6 ಅಂಕ ಪಡೆದಿದೆ. ಅಫ್ಘಾನಿಸ್ತಾನ 3 ಪಂದ್ಯಗಳನ್ನು ಆಡಿ 2 ಪಂದ್ಯಗಳನ್ನು ಗೆದ್ದು 4 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ನಮಬಿಯಾ ಎರಡು ಪಂದ್ಯಗಳನ್ನು ಆಡಿ ಒಂದನ್ನು ಗೆದ್ದಿವೆ. ಆದರೆ ನೆಟ್ ರನ್ರೇಟ್ನಲ್ಲಿ ಕಿವೀಸ್ ಮುಂದಿದೆ. ಟೀಮ್ ಇಂಡಿಯಾ ಮತ್ತು ಸ್ಕಾಟ್ಲೆಂಡ್ ಆಡಿರುವ ಎರಡೂ ಪಂದ್ಯಗಳನ್ನು ಸೋತಿವೆ.

ಟೀಮ್ ಇಂಡಿಯಾ ಮುಂದಿನ ಮೂರೂ ಪಂದ್ಯಗಳನ್ನು ಭರ್ಜರಿಯಾಗಿ ಗೆಲ್ಲಬೇಕಾಗಿರುವ ಜೊತೆಗೆ ಅಫ್ಘಾನಿಸ್ತಾನ ಇನ್ನುಳಿದ 2 ಪಂದ್ಯಗಳನ್ನು ಹೀನಾಯವಾಗಿ ಸೋಲಬೇಕು. ಅಫ್ಘಾನ್ ಕಿವೀಸ್ ಮತ್ತು ಟೀಮ್ ಇಂಡಿಯಾ ವಿರುದ್ಧ ಪಂದ್ಯವನ್ನು ಆಡಬೇಕಿದೆ. ಇನ್ನು ಪಾಕಿಸ್ತಾನ ನಮಿಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧದ ಪಂದ್ಯವನ್ನು ಗೆದ್ದರೂ ಸೋತರೂ ಹೆಚ್ಚು ಲಾಭವಿಲ್ಲ. ಆದರೆ ನ್ಯೂಜಿಲೆಂಡ್ ಅಫ್ಘಾನ್ ವಿರುದ್ಧ ಗೆದ್ದು, ಸ್ಕಾಟ್ಲೆಂಡ್ ಮತ್ತು ನಮಿಬಿಯಾ ವಿರುದ್ಧ ಹೀನಾಯವಾಗಿ ಸೋಲಬೇಕು. ಇದು ಕೊಂಚ ಕಷ್ಟದ ವಿಚಾರ. ಲೆಕ್ಕಾಚಾರಗಳನ್ನು ನೋಡಿದರೆ ಟೀಮ್ ಇಂಡಿಯಾದ ವಿಶ್ವಕಪ್ ಆಸೆಗೆ ಎಳ್ಳುನೀರು ಬಿಡಬೇಕಾದ ಸ್ಥಿತಿಯಲ್ಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd