Virat Kohli | ವಿರಾಟ್ ಗೆ ಯಾರೂ ಪೈಪೋಟಿನೇ ಅಲ್ಲ..
ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಸ್ಥಾನಕ್ಕೆ ಯಾರೂ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂದು ಭಾರತ ಕ್ರಿಕೆಟ್ ನ ದಿಗ್ಗಜ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ 20 ಸರಣಿಯಲ್ಲಿ ವಿರಾಟ್ ಅನುಪಸ್ಥಿತಿಯಲ್ಲಿ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್, ಮೂರನೇ ಕ್ರಮಾಂಕದಲ್ಲಿ ಅದ್ಭುತ ಆಟ ಪ್ರದರ್ಶನ ನೀಡಿದರು.
ಹ್ಯಾಟ್ರಿಕ್ ಹಾಫ್ ಸೆಂಚೂರಿಗಳನ್ನ ಸಿಡಿಸಿ ದಾಖಲೆ ಬರೆದರು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದಲ್ಲಿ ಮೂರನೇ ಸ್ಥಾನಕ್ಕೆ ಅಯ್ಯರ್ ಸೂಕ್ತ ಆಟಗಾರನಾಗಿದ್ದು, ವಿರಾಟ್ ಗೆ ಅಯ್ಯರ್ ಉತ್ತಮವಾದ ರಿಪ್ಲೇಸ್ ಮೆಂಟ್ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ.
ಈ ವಿಚಾರವಾಗಿ ಸುನೀಲ್ ಗವಾಸ್ಕರ್ ಮಾತನಾಡಿದ್ದು, ಅಯ್ಯರ್ ಈಗಿನ್ನೂ ಟೀಂ ಇಂಡಿಯಾದಲ್ಲಿ ಗಟ್ಟಿಯಾಗಿ ನಿಂತುಕೊಳ್ಳುತ್ತಿದ್ದಾರೆ.
ಅವರನ್ನ ವಿರಾಟ್ ಗೆ ಪೈಪೋಟಿ ಎಂಬಂತೆ ಹೇಳುವುದು ಸರಿಯಲ್ಲ ಎಂದಿದ್ದಾರೆ. ಟೀಂ ಇಂಡಿಯಾದಲ್ಲಿ ಕೊಹ್ಲಿ ಸ್ಥಾನಕ್ಕೆ ಯಾರೂ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಿರಾಟ್ ಕೊಹ್ಲಿ ಶತಕಗಳ ದಾಹದಲ್ಲಿರುವುದು ನಿಜ ಆದ್ರೆ ತಂಡದಿಂದ ತಪ್ಪಿಸುವಂತಹ ಪ್ರದರ್ಶನ ಅವರು ನೀಡುತ್ತಿಲ್ಲ ಎಂದು ಕೊಹ್ಲಿ ಪರ ಬ್ಯಾಟ್ ಬೀಸಿದರು.
ಟಿ20ಯಲ್ಲಿ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದರೇ ಉತ್ತಮ, ಶ್ರೇಯಸ್ ಅಯ್ಯರ್ ನಾಲ್ಕನೇ ಅಥವಾ ಐದನೇ ಸ್ಥಾನದಲ್ಲಿ ಬ್ಯಾಟ್ ಬೀಸೊದು ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.