Virat kohli | ನನ್ನ ದೃಷ್ಟಿಯಲ್ಲಿ ಟೆಸ್ಟ್ ನಿಜವಾದ ಕ್ರಿಕೆಟ್
ಮುಂಬೈ : ನನ್ನ ದೃಷ್ಟಿಯಲ್ಲಿ ಟೆಸ್ಟ್ ಕ್ರಿಕೆಟ್ ನಿಜವಾದ ಕ್ರಿಕೆಟ್ ಎಂದು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಮೊಹಾಲಿಯಲ್ಲಿ ಆರಂಭವಾಗಲಿರುವ ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ವೃತ್ತಿಜೀವನದ ನೂರನೇ ಟೆಸ್ಟ್ ಪಂದ್ಯವಾಗಿದೆ. ಹೀಗಾಗಿ ವಿರಾಟ್ ಕೊಹ್ಲಿಯ ಬಗ್ಗೆ ಬಿಸಿಸಿಐ ಒಂದು ವಿಡಿಯೋ ಬಿಡುಗಡೆ ಮಾಡಿದೆ.
ಆ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ”ನಾನು ನೂರು ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ನನ್ನ ದೃಷ್ಟಿಯಲ್ಲಿ ಟೆಸ್ಟ್ ಕ್ರಿಕೆಟ್ ನಿಜವಾದ ಕ್ರಿಕೆಟ್ ಆಗಿದೆ ಎಂದಿದ್ದಾರೆ. ಕ್ರಿಕೆಟ್ ಗೆ ಇಳಿಯೋದಕ್ಕೂ ಮುನ್ನವೇ ಸಣ್ಣ ಸ್ಕೋರ್ ಮಾಡಬಾರದು ಎಂದು ನಿರ್ಧರಿಸಿದ್ದೆ.
ಪ್ರತಿ ಪಂದ್ಯದಲ್ಲೂ ದೊಡ್ಡ ಸ್ಕೋರ್ ಮಾಡಬೇಕು ಅನ್ನೋ ಆಲೋಚನೆ ಇತ್ತು. ಟೆಸ್ಟ್ಗೆ ಪದಾರ್ಪಣೆ ಮಾಡುವ ಮೊದಲು ಜೂನಿಯರ್ ಕ್ರಿಕೆಟ್ನಲ್ಲಿ 7-8 ದ್ವಿಶತಕಗಳನ್ನು ಗಳಿಸಿದ್ದೆ.
ಆ ಕ್ಷಣವೇ ಎಷ್ಟು ಸಾಧ್ಯವೋ ಅಷ್ಟು ಸುದೀರ್ಘ ಬ್ಯಾಟಿಂಗ್ ಮಾಡಬೇಕು ಎಂದು ನಿರ್ಧರಿಸಿದ್ದೆ. ನಾನು ಟೀಂ ಇಂಡಿಯಾಕ್ಕೆ ಕಾಲಿಟ್ಟ ನಂತರ ಅದನ್ನೇ ಮುಂದುವರೆಸಿದ್ದೇನೆ. ಕೆಲವೊಮ್ಮೆ ಯಶಸ್ಸು ಆದರೆ .. ಮತ್ತೆ ಕೆಲವು ಬಾರಿ ಸೋಲಾಗಿದೆ ಎಂದಿದ್ದಾರೆ ವಿರಾಟ್.
ಟೀಂ ಇಂಡಿಯಾ ಪರ 100ನೇ ಟೆಸ್ಟ್ ಆಡಲಿರುವ 12ನೇ ಆಟಗಾರ ಕೊಹ್ಲಿ. ಇನ್ನು 38 ರನ್ ಗಳಿಸುವ ಮೂಲಕ ಕೊಹ್ಲಿ 8,000 ರನ್ ಪೂರೈಸಿದ ಆರನೇ ಬ್ಯಾಟ್ಸ್ಮನ್ ಆಗಲಿದ್ದಾರೆ virat-kohli-test-cricket-real-cricket