RCB ಗಾಗಿ ಆ ತ್ಯಾಗ ಮಾಡ್ತಾರಾ ಕೊಹ್ಲಿ..?
ವಿರಾಟ್ ಕೊಹ್ಲಿಗೆ ಏನಾಗಿದೆ…? ಛೇ..!! ವಿರಾಟ್ ಯಾಕ್ ಇಷ್ಟು ಬೇಜವಾಬ್ದಾರಿ..? ಅಯ್ಯೋ ಇಲ್ಲಿಗೆ ವಿರಾಟ್ ಕಥೆ ಮುಗೀತು..?
ತಂಡದಿಂದ ಕೊಹ್ಲಿಗೆ ಕೋಕ್ ಕೊಟ್ರೆ ಚೆನ್ನಾಗಿರುತ್ತೆ.. ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ವಿಷಯ ಇದು.
ಇದಕ್ಕೆ ಕಾರಣ ಕೂಡ ಇದೆ. ಅದು ಏನಂದರೇ ವಿರಾಟ್ ಕೊಹ್ಲಿಯ ಕೆಟ್ಟ ಪ್ರದರ್ಶನ..
ಹೌದು..!! 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ ಶೈನ್ ಆಗುತ್ತಲೇ ಇಲ್ಲ.
ರನ್ ಗಳಿಸೋದು ಇರ್ಲಿ, ವಿಕೆಟ್ ಕಾಪಾಡಿಕೊಂಡ್ರೆ ಸಾಕು ಎಂಬಂತಾಗಿದೆ ವಿರಾಟ್ ಕೊಹ್ಲಿ ಪರಿಸ್ಥಿತಿ.
ಒಂದಲ್ಲ ಎರಡಲ್ಲ ಬರೋಬ್ಬರು ಆರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದ್ದಾರೆ.
ಅದರಲ್ಲೂ ಬ್ಯಾಕ್ ಟು ಬ್ಯಾಕ್ ಗೋಲ್ಡನ್ ಡಕ್ ಔಟ್ ಕೂಡ ಆಗಿದ್ದಾರೆ. ಇದು ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿಯೇ ಮೊದಲು ಅಂತಾನೇ ಹೇಳಬಹುದು.
ವಿರಾಟ್ ಕೊಹ್ಲಿ ಈ ಮಟ್ಟಿಗೆ ವೈಫಲ್ಯ ಅನುಭವಿಸಿರೋದು ಇದೇ ಮೊದಲು. ಆದರೇ ವಿರಾಟ್ ರ ಈ ಕೆಟ್ಟ ಪ್ರದರ್ಶನಕ್ಕೆ ಕಾರಣವೇನು ಅಂತಾ ಸರ್ಚ್ ಮಾಡಿದ್ರೆ ಅಲ್ಲಿ ಸಿಗೋ ಉತ್ತರ ಒತ್ತಡ..!!!
ಹೌದು..!! ಟೀಂ ಇಂಡಿಯಾದ ಮಾಜಿ ಹೆಚ್ ಕೋಚ್ ರವಿ ಶಾಸ್ತ್ರಿ ಹೇಳಿದಂತೆ ವಿರಾಟ್ ಕೊಹ್ಲಿ ಸತತವಾಗಿ ಕ್ರಿಕೆಟ್ ಆಡಿ ಧಣಿದಿದ್ದಾರೆ.
ಹೀಗಾಗಿ ಅವರಿಗೆ ರೆಸ್ಟ್ ಬೇಕಿದೆ ಎಂದಿದ್ದಾರೆ. ಇಲ್ಲದಿದ್ದರೇ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮತ್ತಷ್ಟು ಕಳಫೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತ ವಿರಾಟ್ ಕೊಹ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವುದು ಆರ್ ಸಿಬಿ ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.
ವಿರಾಟ್ ಬ್ಯಾಟಿಂಗ್ ವೈಫಲ್ಯ ತಂಡದ ಇತರೆ ಆಟಗಾರರಲ್ಲೂ ಗೊಂದಲವನ್ನುಂಟು ಮಾಡುತ್ತಿದೆ.
ತಂಡಕ್ಕೆ ನೆರವಾಗಬೇಕಾದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೈ ಕೊಡುತ್ತಿರುವುದರಿಂದ ಕೆಳಕ್ರಮಾಂಕದ ಬ್ಯಾಟರ್ ಗಳು ಅನಾವಶ್ಯಕವಾಗಿ ಒತ್ತಡಕ್ಕೆ ಸಿಲುಕುತ್ತಿದ್ದಾರೆ.
ಜೊತೆಗೆ ಗೊಂದಲಗೊಂಡು ವಿಕೆಟ್ ಒಪ್ಪಿಸುತ್ತಿದ್ದಾರೆ. ಇದು ಆರ್ ಸಿಬಿಯ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ.
ಹೀಗಾಗಿ ವಿರಾಟ್ ಕೊಹ್ಲಿಗೆ ಕೆಲ ಪಂದ್ಯಗಳ ಮಟ್ಟಿಗೆ ರೆಸ್ಟ್ ನೀಡಬೇಕು ಎಂದು ಹಿರಿಯ ಕ್ರಿಕೆಟಿಗರು ಸಲಹೆ ನೀಡುತ್ತಿದ್ದಾರೆ.
ಇತ್ತ ಲೀಗ್ ಮುಂದೆ ಸಾಗಿದಂತೆ ಇತರೆ ತಂಡಗಳ ಪೈಪೋಟಿ ಕೂಡ ಹೆಚ್ಚಾಗುತ್ತಿದೆ.
ಇಂತಹ ಸಂದರ್ಭದಲ್ಲಿ ವಿರಾಟ್ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳಿವೆ.
ಹೀಗಾಗಿ ಸ್ವತಃ ವಿರಾಟ್ ಕೊಹ್ಲಿ ಅವರೇ ಕೆಲವು ಪಂದ್ಯಗಳಿಂದ ದೂರ ಉಳೀತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಯಾಕಂದರೇ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಟೀಂ ಮ್ಯಾನ್ ಆಗಿದ್ದಾರೆ.
ಅವರು ತಂಡಕ್ಕಾಗಿ ಏನೂ ಬೇಕಾದ್ರೂ ಮಾಡುವ ಅಟಗಾರರಾಗಿರುವುದರಿಂದ ತಂಡದ ಹಿತ ದೃಷ್ಠಿಯಿಂದ ಕೆಲವು ಪಂದ್ಯಗಳಿಂದ ಕೋಕ್ ಪಡೆದುಕೊಳ್ಳುತ್ತಾರಾ ಅನ್ನೋದು ಕಾದುನೋಡಬೇಕು. virat will sacrifice his place in rcb