ನಾಯಕತ್ವಕ್ಕೆ ಗುಡ್ ಬೈ : ಡೇವಿಡ್ ವಾರ್ನರ್ ಶಾಕಿಂಗ್ ನಿರ್ಧಾರ
ಹೈದರಾಬಾದ್ : ಐಪಿಎಲ್ ನ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದಿಂದ ಡೇವಿಡ್ ವಾರ್ನರ್ ಕೆಳಗಿಳಿದಿದ್ದಾರೆ. ಸತತ ಸೋಲುಗಳಿಂದ ನಿರಾಸೆಗೊಂಡಿರುವ ವಾರ್ನರ್ ತಮ್ಮ ನಾಯಕ್ವತದ ಜವಾಬ್ದಾರಿಯನ್ನು ಕೇನ್ ವಿಲಿಯಮ್ಸನ್ ಗೆ ಬಿಟ್ಟುಕೊಟ್ಟಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಹೈದರಾಬಾದ್ ತಂಡ ಆರು ಪಂದ್ಯಗಳನ್ನಾಡಿದ್ದು, ಕೇವಲ ಒಂದರಲ್ಲಿ ಮಾತ್ರ ಗೆಲುವು ದಾಖಲು ಮಾಡಿದೆ. ಉಳಿದ ಐದು ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇದರ ಮಧ್ಯೆ ವಾರ್ನರ್ ನಾಯಕತ್ವದಿಂದ ಕೆಳಗಿಳಿದಿದ್ದು, ಉಳಿದ ಪಂದ್ಯಗಳಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವನಾಗಿ ಮುಂದುವರೆಯಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಾಂಚೈಸಿ ಕೂಡ ಪ್ರಕಟಣೆ ಹೊರಡಿಸಿದೆ.
ನಾಳೆ ರಾಜಸ್ಥಾನ ರಾಯಲ್ಸ್ ವಿರುದ್ಧ ಹೈದರಾಬಾದ್ ತಂಡ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಅನೇಕ ಬದಲಾವಣೆಗಳು ಆಗಲಿವೆ ಎಂದು ಪ್ರಾಂಚೈಸಿ ಹೇಳಿಕೊಂಡಿದೆ.
ಅಂದಹಾಗೆ ಚೆನ್ನೈ ವಿರುದ್ಧ ಪಂದ್ಯದಲ್ಲಿ ಸೋಲುಂಡ ಬಳಿಕ ಮಾತನಾಡಿದ್ದ ವಾರ್ನರ್, ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಿದ್ದರು.