ದಿನಕ್ಕೆ 13-14 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಬಹುದು – ವಿಕೆ ಪಾಲ್ ರಿಂದ ಎಚ್ಚರಿಕೆ.
ಯುಕೆ ಮತ್ತು ಫ್ರಾನ್ಸ್‌ನಿಂದ ವರದಿಯಾಗುತ್ತಿರುವ ಕೋವಿಡ್ -19 ಪ್ರಕರಣಗಳ ಸಂಖ್ಯೆಯು ಭಾರತದ ಜನಸಂಖ್ಯೆಗೆ ಹೋಲಿಸಿದರೆ, ದಿನವೊಂದಕ್ಕೆ 13-14 ಲಕ್ಷ ಪ್ರಕರಣಗಳು ವರದಿಯಾಗಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ನೀತಿ ಆಯೋಗದ ಸದಸ್ಯ (ಆರೋಗ್ಯ) ಮತ್ತು ಭಾರತದ ರಾಷ್ಟ್ರೀಯ ಕೋವಿಡ್ -19 ಕಾರ್ಯಪಡೆಯ ಮುಖ್ಯಸ್ಥ ವಿಕೆ ಪಾಲ್ ಅವರು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಹೆಳಿದ್ದಾರೆ.
ಕಳೆದ ವರ್ಷ ಮೇ ಆರಂಭದಲ್ಲಿ ಡೆಲ್ಟಾ ತರಂಗದ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಭಾರತವು ಪ್ರತಿದಿನ 4 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವರದಿಯಾಗುತ್ತಿತ್ತು.
ಒಮಿಕ್ರಾನ್ ರೂಪಾಂತರದ ಪ್ರಸರಣ ವಿಶ್ವದೆಲ್ಲೆಡೆ ಶುರುವಾಗಿದೆ. ಅದರ ಬೆನ್ನಲ್ಲೇ ಯುಕೆ ಮತ್ತು ಫ್ರಾನ್ಸ್ನಲ್ಲಿ ಕೊವಿಡ್ 19 ಪ್ರಕರಣಗಳಲ್ಲಿ ಸಿಕ್ಕಾಪಟೆ ಹೆಚ್ಚಳ ಕಂಡುಬಂದಿದೆ. ಭಾರತದಲ್ಲೂ ಇದರ ಸಂಖ್ಯೆ ನೂರರ ಗಡಿ ದಾಟಿದೆ. ಇದರಿಂದ ಭಾರತವು ತೊಂದರೆಗೊಳಗಾಗುವುದನ್ನ ತಪ್ಪಿಸಲು ಭಾರತ ಎಚ್ಚರಿಕೆಯನ್ನ ವಹಿಸಬೇಕಿದೆ. ಎಂದು ನೀತಿ ಆಯೋಗದ ಸದಸ್ಯ ಹೇಳಿದ್ದಾರೆ.