Washington Sundar : ಗಾಯಗಳೊಂದಿಗೆ ವರ್ಷ ಕಳೆದ ಸುಂದರ್
ವಾಷಿಂಗ್ ಟನ್ ಸುಂದರ್.. ಟೀಂ ಇಂಡಿಯಾದ ಕ್ರಿಕೆಟ್ ಗಳಲ್ಲಿ ಅತ್ಯಂತ ನತದೃಷ್ಠ ಕ್ರಿಕೆಟಿಗ.
ಬೌಲಿಂಗ್ ಆಲ್ ರೌಂಡರ್ ಆಗಿ ಹೆಸರು ಪಡೆದಿರುವ ಸುಂದರ್, ಟೀಂ ಇಂಡಿಯಾದಲ್ಲಿರುವುದಕ್ಕಿಂತ ಹೊರಗಡೆ ಇದ್ದಿದ್ದೇ ಹೆಚ್ಚು.
ಬರೋಬ್ಬರಿ ಒಂದು ವರ್ಷದಿಂದ ಸುಂದರ್ ಗಾಯದಿಂದ ತಂಡದಿಂದ ಹೊರಗಡೆ ಇದ್ದಾರೆ. ತಂಡಕ್ಕೆ ಆಯ್ಕೆಯಾದ ಪ್ರತಿಬಾರಿ ಯಾವುದೋ ಒಂದು ಗಾಯದ ಸಮಸ್ಯೆಯಿಂದ ತಂಡಕ್ಕೆ ದೂರವಾಗುತ್ತಲೇ ಇರುತ್ತಾರೆ.
ಸದ್ಯ ಜಿಂಬಾಬ್ವೆ ಸರಣಿಗೆ ವಾಷಿಂಗ್ ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದ್ರೆ ಅವರು ಮತ್ತೆ ಗಾಯಗೊಂಡಿದ್ದಾರೆ. ಹೀಗಾಗಿ ಸರಣಿಯಿಂದ ದೂರವಾಗಿದ್ದಾರೆ.
2021 ರಿಂದ ವಾಷಿಂಗ್ ಟನ್ ಸುಂದರ್ ಪದೇ ಪದೇ ಗಾಯಕ್ಕೆ ಒಳಗಾಗುತ್ತಲೇ ಇದ್ದಾರೆ.
ಇಂಗ್ಲೆಂಡ್ ಪ್ರವಾಸದ ಭಾಗವಾಗಿ ಕೌಂಟಿ ಎಲೆವೆನ್ ಪರ ಆಡಿದ ಸುಂದರ್, ಇಂಡಿಯಾ ಜೊತೆ ನಡೆದ ಮೂರು ದಿನಗಳ ವಾರ್ಮ್ ಅಪ್ ಮ್ಯಾಚ್ ನಲ್ಲಿ ಗಾಯಗೊಂಡರು. ಇದರಿಂದ ಇಂಗ್ಲೆಂಡ್ ವಿರುದ್ಧ ನಾಲ್ಕು ಟೆಸ್ಟ್ ಮ್ಯಾಚ್ ಗಳ ಸರಣಿ ಜೊತೆಗೆ 2021ರ ಐಪಿಎಲ್ ಆ ನಂತರ ಟಿ 20 ವಿಶ್ವಕಪ್ ಗೂ ಕೂಡ ದೂರವಾಗಿದ್ದರು.
ಜನವರಿ 2022… ಕೋವಿಡ್ ಪಾಸಿಟಿವ್
ಕೈ ಬೆರಳು ಗಾಯದೊಂದಿಗೆ ಚೇತರಿಸಿಕೊಂಡು ವಿಜಯ್ ಹಜಾರೆಯಲ್ಲಿ ಅದ್ಭತ ಪ್ರದರ್ಶನ ನೀಡಿದ ಸುಂದರ್, ಸೌತ್ ಆಫ್ರೀಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಆದ್ರು. ಆದ್ರೆ ಕೊರೊನಾ ಸೋಂಕು ಶನಿಯಂತೆ ವಕ್ಕರಿಸಿತು. ಇದರಿಂದ ಸೌತ್ ಆಫ್ರಿಕಾ ಸರಣಿಗೆ ದೂರವಾದರು.
ಫೆಬ್ರವರಿ 2022.. ತೊಡೆಯ ಸ್ನಾಯುಗೆ ಗಾಯ
ಸ್ವದೇಶದಲ್ಲಿ ನಡೆದ ವಿಂಡೀಸ್ ವಿರುದ್ಧದ ಸರಣಿಗೆ ಆಯ್ಕೆಯಾದ ಸುಂದರ್ ಒಂದೇ ಒಂದು ಮ್ಯಾಚ್ ಗೆ ಸೀಮಿತವಾದರು. ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಇಂಜೂರಿಯಾದರು. ಇದರೊಂದಿಗೆ ವಿಂಡೀಸ್ ವಿರುದ್ಧದ ಟಿ 20 ಸರಣಿಯಿಂದ ದೂರವಾದರು.
ಏಪ್ರಿಲ್ 2022.. ಕೈಗೆ ಗಾಯ
ವಿಂಡೀಸ್, ಲಂಕಾ ಸರಣಿಗೆ ದೂರವಾದ ಸುಂದರ್, ಆ ನಂತರ ಐಪಿಎಲ್ 2022ರಲ್ಲಿ ಎಸ್ ಆರ್ ಹೆಚ್ ತಂಡದ ಪರ ಆಡಿದ್ದರು. ಏಪ್ರಿಲ್ 11 ರಂದು ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಮ್ಯಾಚ್ ನಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡರು. ಇದರೊಂದಿಗೆ ಮೂರು ಪಂದ್ಯಗಳಿಂದ ದೂರ ಉಳಿದರು.
ಆಗಸ್ಟ್ 2022.. ಭುಜದ ಗಾಯ
ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗದೇ ಇರುವ ಕಾರಣ ಕೌಂಟಿ ಕ್ರಿಕೆಟ್ ಆಡೋದಕ್ಕೆ ಲಂಡನ್ ಗೆ ತೆರಳಿದರು. ಅಲ್ಲಿ ಲಂಕಾಶೈರ್ ಪರ ಆಡಿ ಅದ್ಭುತ ಪ್ರದರ್ಶನ ನೀಡಿದರು. ಹೀಗಾಗಿ ಅವರನ್ನ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಮಾಡಲಾಯಿತು. ಆದ್ರೆ ಮತ್ತೆ ಗಾಯಗೊಂಡು ಜಿಂಬಾಬ್ವೆ ಸರಣಿಯನ್ನ ಮಿಸ್ ಮಾಡಿಕೊಂಡಿದ್ದಾರೆ.
ಈ ವರ್ಷ ಪೂರ್ತಿ ಗಾಯಗಳೊಂದಿಗೆ ಸಹವಾಸ ಮಾಡಿದ ಸುಂದರ್, ಮುಂಬರುವ ದಿನಗಳಲ್ಲಾದ್ರೂ ತಂಡಕ್ಕೆ ವಾಪಸ್ ಆಗುತ್ತಾರಾ ಎಂಬೊದನ್ನ ಕಾದು ನೋಡಬೇಕು.