WC 2022 Final | ದಿಗ್ಗಜರ ದಾಖಲೆ ಮುರಿದ ಆಲಿಸಾ ಹೀಲಿ

1 min read
wc-2022-final-alyssa-healy-breaks-adam-gilchrist-world-record saaksha tv

WC 2022 Final | ದಿಗ್ಗಜರ ದಾಖಲೆ ಮುರಿದ ಆಲಿಸಾ ಹೀಲಿ

ಐಸಿಸಿ ಮಹಿಳಾ ವಿಶ್ವಕಪ್-2022 ರ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ವಿಕೆಟ್‌ ಕೀಪರ್ – ಬ್ಯಾಟರ್  ಆಲಿಸಾ ಹೀಲಿ ಅತ್ಯುದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.  ಇಂಗ್ಲೆಂಡ್ ಬೌಲರ್ ಗಳಿಗೆ ಯಾವ ಹಂತದಲ್ಲೂ ಮೇಲು ಗೈ ಸಾಧಿಸಲು ಅವಕಾಶ ನೀಡದ ಆಲಿಸ್ಸಾ ವಿಧ್ವಂಸಕ ಆಟದ ಪ್ರದರ್ಶನ ನೀಡಿದರು. ಕೇವಲ 138 ಎಸೆತಗಳಲ್ಲಿ 170 ರನ್ ಗಳಿಸಿ ಇಂಗ್ಲೆಂಡ್ ಬೌಲರ್ ಗಳಿಗೆ ದುಃಸ್ವಪ್ನ ಕಾಡಿದರು. ಅಲಿಸ್ಸಾ ತಮ್ಮ  ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 26 ಬೌಂಡರಿಗಳನ್ನು ಬಾರಿಸಿದರು.

ಈ ಅದ್ಭುತ ಇನ್ನಿಂಗ್ಸ್ ನೊಂದಿಗೆ ಅಲಿಸ್ಸಾ ವಿಶ್ವಕಪ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.  ಆಡಮ್ ಗಿಲ್‌ಕ್ರಿಸ್ಟ್ ಹೆಸರಿನ ಮೇಲಿದ್ದ ವಿಶ್ವ ದಾಖಲೆಯನ್ನು ಮುರಿದ ಅಲಿಸ್ಸಾ, ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತ್ಯಧಿಕ ಸ್ಕೋರ್ ದಾಖಲಿಸಿದ ಕ್ರಿಕೆಟರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

wc-2022-final-alyssa-healy-breaks-adam-gilchrist-world-record saaksha tv

ಇದಲ್ಲದೇ ಕ್ರಿಕೆಟ್ ದಿಗ್ಗಜರಾದ ಆಡಮ್ ಗಿಲ್ ಕ್ರಿಸ್ಟ್, ರಿಕಿ ಪಾಂಟಿಂಗ್ ಮತ್ತು ವಿವಿಯನ್ ರಿಚರ್ಡ್ಸ್ ಅವರನ್ನ ಹಿಂದಿಕ್ಕಿದ್ದಾರೆ. ಆ ಮೂಲಕ ವಿಶ್ವಕಪ್ ಫೈನಲ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.   

 ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿ ಹೀಗಿದೆ.

ಅಲಿಸ್ಸಾ ಹೀಲಿ 170 ರನ್,  ಆಡಮ್ ಗಿಲ್‌ಕ್ರಿಸ್ಟ್  2007ರಲ್ಲಿ ಶ್ರೀಲಂಕಾ ವಿರುದ್ಧ 149 ರನ್,  ರಿಕಿ ಪಾಂಟಿಂಗ್  2003ರಲ್ಲಿ ಭಾರತದ ವಿರುದ್ಧ  140 ರನ್,  4. ವಿವಿಯನ್ ರಿಚರ್ಡ್ಸ್  1979 ರಲ್ಲಿ ಇಂಗ್ಲೆಂಡ್ ವಿರುದ್ಧ  138 ರನ್. wc-2022-final-alyssa-healy-breaks-adam-gilchrist-world-record

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd