ನವದೆಹಲಿ: ಮತ್ತೆ ರಾಮನಗರ (Ramanagara) ಎಂಬ ಹೆಸರನ್ನು ಮರು ನಾಮಕರ ಮಾಡುತ್ತೇವೆ. ಈ ಹೆಸರು ತೆಗೆಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯನ್ನಾಗಿ ಮರು ನಾಮಕರಣ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಮನ ಹೆಸರು ತೆಗೆಯಲು ಸಾಧ್ಯವೇ ಇಲ್ಲ. ನೀವು ಈಗಷ್ಟೇ ಖುಷಿಯಾಗಿರಿ, 2028ರ ನಂತರ ಮತ್ತೆ ನಾವು ರಾಮನಗರ ಹೆಸರನ್ನು ನಾಮಕರಣ ಮಾಡುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಮನಗರ ಇತಿಹಾಸ ಅವರಿಗೆ ಗೊತ್ತಿದ್ಯಾ? ಅದು ಗೊತ್ತಿದ್ದರೇ ತೆಗೆಯುತ್ತಿರಲಿಲ್ಲ. ಕಾಂಗ್ರೆಸ್‌ನ ರಾಜಕೀಯ ಪತನ ಆರಂಭವಾಗಿದೆ. ರಾಮನಗರ ಈಗಾಗಲೇ ಅಭಿವೃದ್ಧಿಯಾಗಿದೆ. ಹೆಸರು ಬದಲಿಸಿ ಭೂಮಿ ಬೆಲೆ ಏರಿಸಬೇಕಾ? ಹೆಸರು ಬದಲಾಯಿಸಿದರೆ ಬೆಲೆ ಏರುತ್ತಾ? ಕಾನೂನು ಸುವ್ಯವಸ್ಥಿತೆ ಹೇಗಿದೆ ನೋಡಬೇಕು? ಇದನ್ನು ಸರಿಯಾಗಿಡದೇ ಏನು ಅಭಿವೃದ್ಧಿ ಮಾಡಿದ್ರೆ ಏನು ಪ್ರಯೋಜನ? 2028ರೊಳಗೆ ಮತ್ತೆ ರಾಮನಗರ ಅಂತ ಬಂದೆ ಬರುತ್ತದೆ ಎಂದು ಹೇಳಿದ್ದಾರೆ. ಶುಕ್ರವಾರ ರಾಮನಗರ ಹೆಸರು ಬದಾಯಿಸುವುದಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ.








