ಪುಣ್ಯ ಸ್ನಾನ ಮಾಡಲು ಹೋಗಿ ಜಲ ಸಮಾಧಿಯಾದ ಯುವಕರು

1 min read
Krishna Saaksha Tv

ಪುಣ್ಯ ಸ್ನಾನ ಮಾಡಲು ಹೋಗಿ ಜಲ ಸಮಾಧಿಯಾದ ಯುವಕರು

ರಾಯಚೂರು: ಮಕರ ಸಂಕ್ರಾಂತಿ ನಿಮಿತ್ತ ನದಿಗೆ ತೆರಳಿ ಪುಣ್ಯಸ್ನಾನ ಮಾಡಲು ಹೋದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ. ಘಟನೆಯು ರಾಯಚೂರು ಜಿಲ್ಲೆಯ ದೇವಸುಗೂರಿನ ಕೃಷ್ಣಾ ನದಿಯಲ್ಲಿ ನಡೆದಿದೆ.

ಶುಕ್ರುವಾರ ಸಂಕ್ರಾಂತಿ ನಿಮ್ಮತ್ತ ಏಳು ಜನ ಗೆಳೆಯರು ಸೇರಿ ನದಿ ಸ್ನಾನಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ನದಿಗೆ ಇಳಿದ ಗಣೇಶ್ (30) ಮತ್ತು ಉದಯ್ (31) ಗೆಳೆಯರು ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ತಕ್ಷಣವೇ ಉಳಿದ ಗೆಳೆಯರು ಅಗ್ನಿ ಶಾಮಕ ದಳಕ್ಕೆ ಖರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಶೋಧ ಕಾರ್ಯ ಪ್ರಾರಂಭಿಸಿದ್ದು, ಗಣೇಶನ ಶವ ಪತ್ತೆಯಾಗಿದೆ. ಉದಯ ಕುಮಾರನಿಗಾಗಿ ಶೋಧ ಕಾರ್ಯ ನಡೆದಿದೆ.

ಗಣೇಶ್ ನಿಜಲಿಂಗಪ್ಪ ಕಾಲೋನಿಯ ನಿವಾಸಿಯಾಗಿದ್ದು, ಉದಯ್ KEB ಕಾಲೋನಿಯ ನಿವಾಸಿಯಾಗಿದ್ದಾರೆ. ಸದ್ಯ ಮನೆಯಲ್ಲಿ ಸಾವಿನ ಸೂತಕದ ಛಾಯೆ ಆವರಿಸಿದೆ. ಉದಯ್ ಮತ್ತು ಗಣೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd