ಬೆಳ್ಳಿ ಪಾತ್ರೆಗಳ ಉಪಯೋಗಿಸುವುದರಿಂದ ಆಗುವ ಪ್ರಯೋಜನವೇನು.?ಸದಾ ಕಾಲ ಭಂಗವಂತ ನೆಲೆಸಲು ಈ ರೀತಿ ಮಾಡಿ
ಅದೆಷ್ಟೋ ಜನರ ಮನೆಗಳ ಬೀರುವಿನೊಳಗೆ ಬೆಳ್ಳಿಯ ತಟ್ಟೆ,ಲೋಟಗಳು ಎಂದೂ ಉಪಯೋಗಿಸದೆ ಹೊಳಪು ಕಳೆದುಕೊಂಡಿದೆಯೋ ಏನೋ..!!ಇನ್ನೂ ಕೆಲವರ ಮನೆಗಳಲ್ಲಿ ಹಬ್ಬ ಹರಿ ದಿನಗಳಲ್ಲಿ ಈಚೆ ಬಂದು ಮತ್ತೆ ಅದೇ ಸ್ಥಳವೇ ಗತಿಯಾಗಿದೆಯೋ!!ಇನ್ನೂ ಕೆಲವರ ಮನೆಗಳಲ್ಲಿ ದೇವರ ಕೋಣೆಯಲ್ಲಿ ಮಾತ್ರ!!
ಅಪ್ರಯೋಜನವಾಗಿ ಉಪಯೋಗಿಸುವ ಬದಲು ಅದೇ ಬೆಳ್ಳಿಯ ತಟ್ಟೆ,ಲೋಟಗಳಲ್ಲಿ ಇವರುಗಳೇ ದಿನವೂ ತಿಂದುಂಡು ಮಾಡಿದ್ದರೆ ಆರೋಗ್ಯ
ಉತ್ತಮವಾಗಿರುತ್ತಿತ್ತು.
ಆ ಸರ್ವ ಶಕ್ತ ಪರಮಾತ್ಮ ನಮ್ಮೊಳಗಿದ್ದಾನೆ ಇದನ್ನೇ “ಅಹಂ ಬ್ರಹ್ಮಾಸ್ಮಿ”ಎಂದು ಸೂಚ್ಯವಾಗಿ ಋಷಿಮುನಿಗಳು ಹೇಳಿರುವುದು.ನಮ್ಮೊಳಗಿರುವ ಪರಮಾತ್ಮನಿಗೆ ಯಾವುದೋ ಸ್ಟೀಲ್ ತಟ್ಟೆ,ಲೋಟಗಳಲ್ಲಿ ಉಣಬಡಿಸಿ ಆ ಬೆಳ್ಳಿಯ ತಟ್ಟೆ,ಲೋಟಗಳನ್ನು ಬೀರುವಿನೊಳಗೆ ಸುಭದ್ರವಾಗಿ ಇಟ್ಟು ಪ್ರಯೋಜನವೇನು ?!
ಸ್ನೇಹಿತರೇ,ಈ ಆಂಟಿ ಬಯೊಟಿಕ್ಸ್ ಗಳು ಕಂಡು ಹಿಡಿಯುವ ಅದೆಷ್ಟೋ ಶತ-ಶತಮಾನಗಳ ಹಿಂದೆಯೇ ನಮ್ಮ ಹಿರಿಹಿರಿಯರು ಬೆಳ್ಳಿ ಯಲ್ಲಿ ಆಂಟಿ ಬಯೊಟಿಕ್ಸ್ ಗುಣಗಳಿರುವುದನ್ನು ಕಂಡುಕೊಂಡಿದ್ದರು.ಈಗ ಕಂಡು ಹಿಡಿಯಲಾದ ಅಷ್ಟೂ ಆಂಟಿ ಬಯೊಟಿಕ್ಸ್ ಗಳಿಗಿಂತ ಅತ್ಯುತ್ತಮ ಮತ್ತು ಶ್ರೇಷ್ಠ ಆಂಟಿ ಬಯೊಟಿಕ್ಸ್ ಬೆಳ್ಳಿಯದು.ಅದರ ಜೊತೆಗೆ ಬೆಳ್ಳಿಯ ಉಪಯೋಗದಿಂದ ಆಹಾರದಲ್ಲಿನ ಶುದ್ಧತೆ ಹೆಚ್ಚುತ್ತದೆ.ಆಹಾರಕ್ಕೆ ಅಪ್ರತ್ಯಕ್ಷವಾಗಿ ಮುತ್ತಿಕೊಂಡ ಸೂಕ್ಷ ಅಣುಗಳು ದೂರವಾಗುತ್ತವೆ.
ಹಾಗಾಗಿಯೇ ಹಿಂದೆಲ್ಲಾ ಆರ್ಥಿಕವಾಗಿ ಸ್ವಲ್ಪ ಸಧೃಢವಾಗಿರುವವರು ಬೆಳ್ಳಿಯ ತಟ್ಟೆ,ಲೋಟಗಳನ್ನೇ ತಮ್ಮ ದೈನಂದಿನ ಆಹಾರ-ಪಾನೀಯಗಳನ್ನು ಸೇವಿಸಲು ಬಳಸುತ್ತಿದ್ದರು.ಕೊನೆ ಪಕ್ಷ ಮಗುವಿಗೆ ಹಾಲು,ಮಣ್ಣಿ ಇಂಥವುಗಳನ್ನು ತಿನ್ನಿಸಲಾದರೂ ಬಳಸುತಿದ್ದರು.ಇನ್ನು ಆರ್ಥಿಕವಾಗಿ ಸಬಲರಲ್ಲದವರು ಏನಾದರೂ ಕಾಯಿಲೆ ಕಸಾಲೆ ಬಂದಾಗ ಹಳ್ಳಿಯ ನಾಟಿ ವೈದ್ಯನ ಬಳಿ ತೆರಳುತಿದ್ದರು.

ಆತ ತನ್ನ ಬಳಿಗೇ 3-4ದಿನ ಬರಲು ಹೇಳಿ ಆತನ ಬಳಿ ಇರುತ್ತಿದ್ದ ನೀರು ತುಂಬಿದ ತಂಬಿಗೆಯಿಂದಲೋ,ಲೋಟದಿಂದಲೋ ನೀರನ್ನು ಒಳಗಿನಿಂದ ತಂದು ಯಾವುದಾದರೂ ಗಿಡ ಮೂಲಿಕೆಯ ಪುಡಿಯನ್ನು ಕೊಟ್ಟು ಅಲ್ಲೇ ಆ ನೀರಿನೊಂದಿಗೆ ಸೇವಿಸಲು ಕೊಟ್ಟು ಕಾಯಿಲೆಗಳನ್ನು ವಾಸಿ ಮಾಡುತಿದ್ದ. ಹೀಗೆ ಆಂಟಿ ಬಯೊಟಿಕ್ಸ್ ಬರುವುದಕ್ಕೂ ಮುಂಚಿನ ಕಥೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಈಗ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಬೆಳ್ಳಿಯ ತಟ್ಟೆಯೋ,ತಂಬಿಗೆಯೋ ಲೋಟವೊ ಇದ್ದೇ ಇದೆ.ದಯವಿಟ್ಟು ಅವನ್ನು ಹೊರ ತೆಗಿಯಿರಿ ನಿಮ್ಮೊಳಗಿನ ಪರಮಾತ್ಮನಿಗೆ ದಿನವೂ ಅದರಲ್ಲೇ ಉಣಬಡಿಸಿ.ಆರೋಗ್ಯವಿದ್ದಲ್ಲಿ ಆನಂದ,ಆನಂದವಿದ್ದಲ್ಲಿ ಪರಮಾತ್ಮ .