ಚೀನೀ ಆಪ್ ಗಳ ಬ್ಯಾನ್ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

ನವದೆಹಲಿ : ದೇಶದಲ್ಲಿ ಚೀನೀ ಆಪ್ ಗಳನ್ನು ನಿಷೇಧಿಸಬೇಕೆಂದು ಹಲವು ದಿನಗಳಿಂದ ದೇಶಾದ್ಯಂತ ಆಂದೋಲನದ ರೂಪದಲ್ಲಿ ಕೇಳಿಬರುತ್ತಿದ್ದ ಒತ್ತಾಯಕ್ಕೆ ಕೇಂದ್ರ ಸರ್ಕಾರ ಕೊನೆಗೂ ಸಮ್ಮತಿ ವ್ಯಕ್ತಪಡಿಸಿದೆ. ಭಾರತದಲ್ಲಿ ತುಂಬಾ ಜನಪ್ರಿಯವಾಗಿರುವ ಟಿಕ್ ಟಾಕ್ ಸೇರಿದಂತೆ ಚೀನೀ ನಿರ್ಮಿತ 59 ಆಪ್ ಗಳನ್ನ ನಿಷೇಧಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದಲ್ಲಿ ಚೀನಾದ 59 ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದಾಕ್ಷಣ ಸತ್ಯ ಸುಳ್ಳಾಗುವುದಿಲ್ಲ ಎಂದು ಕುಟುಕಿದ್ದಾರೆ.

ಭಾರತಕ್ಕೆ ಚೀನಾದ ಆಮದು ಪ್ರಮಾಣ ಗ್ರಾಫ್ ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ವ್ಯಂಗ್ಯ ಮಾಡಿದ್ದಾರೆ. ಬಿಜೆಪಿ ಮತ್ತು ಎನ್ ಡಿಎ ಸರ್ಕಾರ ಮೇಕ್ ಇನ್ ಇಂಡಿಯಾ ಉತ್ತೇಜಿಸುತ್ತೆ ಆದರೆ ಚೀನಾ ವಸ್ತುಗಳನ್ನು ಅತಿ ಹೆಚ್ಚು ಖರೀದಿಸುತ್ತೆ. ಆಪ್ ಬ್ಯಾನ್ ಮಾಡಿದಾಕ್ಷಣ ಸತ್ಯ ಸುಳ್ಳಾಗುವುದಿಲ್ಲ ಎಂದು ಟೀಕಿಸಿದ್ದಾರೆ.

ಅಲ್ಲದೆ 2008 ರಿಂದ 2014ವರೆಗೂ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಚೀನಾದ ಅಮದು ಪ್ರಮಾಣ ಶೇ.14 ಕ್ಕಿಂತ ಕಡಿಮೆ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ಆಮದು ಪ್ರಮಾಣ ಶೇ.18 ಹೆಚ್ಚಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This