ತಿರುವನಂತಪುರಂ: ಕೇರಳದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.
ಆರೋಪಿ ಡೊಮಿನಿಕ್ ಮಾರ್ಟಿನ್ (Dominic Martin) ವಿಚಾರಣೆ ಸಂದರ್ಭದಲ್ಲಿ ಹಲವಾರು ವಿಚಾರಗಳನ್ನು ಹೇಳಿದ್ದಾನೆ. ಝಮ್ರಾ ಕನ್ವೆನ್ಷನ್ ಸೆಂಟರ್‍ನ ಪ್ರಾರ್ಥನಾ ಮಂದಿರದಲ್ಲಿ ನನ್ನ ಅತ್ತೆಯೂ ಇದ್ದರು. ಆದರೆ, ಅವರು ಕುಳಿತಿದ್ದ ಸ್ಥಳ ತಪ್ಪಿಸಿ ಬಾಂಬ್ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ಕುರ್ಚಿಯ ಕೆಳಗಡೆ ಟಿಫನ್ ಬಾಕ್ಸ್ ಅಲ್ಲ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಬಾಂಬ್ ಇಟ್ಟಿದ್ದೆ. ಬ್ಲಾಸ್ಟ್ ತೀವ್ರತೆಯಿಂದ ಉಂಟಾಗಲಿ ಎಂಬ ಕಾರಣದಿಂದ ಪೆಟ್ರೋಲ್ (Petrol) ಬಳಕೆ ಮಾಡಿ ಕೂಡ ಬಳಕೆ ಮಾಡಿದ್ದೆ ಎಂದಿದ್ದಾನೆ. ಬಾಂಬ್ ಸ್ಫೋಟವಾದ ನಂತರ ಆತನ ಗೆಳೆಯನಿಗೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಆತನ ವಿಚಾರಣೆಗೂ ಪೊಲೀಸರು ಮುಂದಾಗಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.








