ದೀಪಾವಳಿ ಹಬ್ಬವು ಲಕ್ಷ್ಮಿ ದೇವಿಯ ಆರಾಧನೆಗೆ ಹಾಗೂ ದೀಪಗಳ ಆರಾಧನೆಗೆ ಸಮರ್ಪಿತವಾದ ಹಬ್ಬವಾಗಿದೆ. ದೀಪಾವಳಿ ಹಬ್ಬದ ದಿನದಂದು ನಾವು ಯಾವ ಕೆಲಸಗಳನ್ನು ಮಾಡಬೇಕು.? ದೀಪಾವಳಿ ಹಬ್ಬದ ದಿನದಂದು ಯಾವ ಕೆಲಸಗಳನ್ನು ಮಾಡಬಾರದು.? ದೀಪಾವಳಿ ಹಬ್ಬದ ದಿನ ಈ ಎಲ್ಲಾ ನಿಯಮಗಳನ್ನು ನೀವು ಪಾಲಿಸಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೀಪಾವಳಿ ಹಬ್ಬವನ್ನು ಹಿಂದೂಗಳು ಆಚರಿಸುವ ಅತ್ಯಂತ ಮಹತ್ತರವಾದ ಹಬ್ಬವೆಂದು ಹೇಳಲಾಗುತ್ತದೆ. ಈ ವರ್ಷ ಅಂದರೆ, 2024 ರ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಂದು ಗುರುವಾರ ಆಚರಿಸಲಾಗುವುದು. ಈ ದಿನ ಲಕ್ಷ್ಮಿ ಪೂಜೆಗೆ ಮತ್ತು ದೀಪಗಳನ್ನು ಬೆಳಗುವುದಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನ ಮನೆಯ ಮೂಲೆ ಮೂಲೆಯಲ್ಲೂ ದೀಪವನ್ನು ಬೆಳಗಿಸುವ ಮೂಲಕ ಲಕ್ಷ್ಮಿ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಈ ವಿಶೇಷ ದಿನದಂದು ನಾವು ಮಾಡುವ ಪ್ರತಿಯೊಂದು ಕೆಲಸದ ಮೇಲೂ ನಾವು ವಿಶೇಷ ಎಚ್ಚರಿಕೆಯನ್ನು ಹೊಂದಿರಬೇಕು. ದೀಪಾವಳಿ ಹಬ್ಬದ ದಿನದಂದು ನಾವು ಕೆಲವೊಂದು ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿದೆ. ಅವುಗಳ ಕುರಿತು ಇಲ್ಲಿ ತಿಳಿಯೋಣ.
ದೀಪಾವಳಿ 2024 ರ ದಿನದಂದು ನಾವು ಏನು ಮಾಡಬೇಕು.? ಏನು ಮಾಡಬಾರದು.?
ಈ ಬಣ್ಣದ ಬಟ್ಟೆಯನ್ನು ಧರಿಸದಿರಿ
ದೀಪಾವಳಿ ಹಬ್ಬದ ದಿನದಂದು ನಾವು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು. ಯಾಕೆಂದರೆ ಕಪ್ಪು ಬಣ್ಣವು ನಕಾರಾತ್ಮಕತೆಯ ಸಂಕೇತವಾಗಿದೆ ಹಾಗೂ ಹಿಂದೂ ಧರ್ಮದಲ್ಲಿ ಕಪ್ಪು ಬಣ್ಣವನ್ನು ಶುಭ ಕಾರ್ಯದ ವೇಳೆ ಧರಿಸುವುದು ನಿಷಿದ್ಧವಾಗಿದೆ. ಮಂಗಳಕರ ಸಮಯದಲ್ಲಿ ಅಥವಾ ಸಂದರ್ಭದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸುವುದನ್ನು ತಪ್ಪಿಸಬೇಕು. ಇಲ್ಲವಾದರೆ, ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು.
ಇವರನ್ನು ಹಾಗೇ ಕಳುಹಿಸಬೇಡಿ
ದೀಪಾವಳಿ ದಿನದಂದು ಸಾಕಷ್ಟು ಭಿಕ್ಷುಕರು ಆಹಾರವನ್ನು ಬೇಡಿ ನಿಮ್ಮ ಮನೆಯ ಬಾಗಿಲಿಗೆ ಬರಬಹುದು. ಅವರನ್ನು ಖಾಲಿ ಕೈಯಲ್ಲಿ ಕಳುಹಿಸಬೇಡಿ. ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಅವರಿಗೆ ದಾನ – ಧರ್ಮ ಮಾಡಿ ಸಹಕರಿಸಿ. ಭಿಕ್ಷುಕರು ಮಾತ್ರವಲ್ಲ, ಪ್ರಾಣಿ, ಪಕ್ಷಿಗಳು ಕೂಡ ನಿಮ್ಮ ಮನೆಯ ಬಾಗಿಲಿಗೆ ಬಂದಾಗ ಅವುಗಳನ್ನು ಹಾಗೇ ಓಡಿಸಬೇಡಿ. ಅವುಗಳಿಗೂ ತಿನ್ನಲು ಏನನ್ನಾದರೂ ನೀಡಿ. ಯಾಕೆಂದರೆ ಈ ದಿನ ಲಕ್ಷ್ಮಿ ದೇವಿಯು ಭೂಲೋಕಕ್ಕೆ ಬರುತ್ತಾಳೆ. ಅವಳು ಯಾವುದೇ ರೂಪದಲ್ಲಿ ಬೇಕಾದರೂ ನಿಮ್ಮ ಮನೆಯನ್ನು ಪ್ರವೇಶಿಸಬಹುದು. ಆದ್ದರಿಂದ ನಿಮ್ಮ ಮನೆ ಬಾಗಿಲಿಗೆ ಆಹಾರ ಕೇಳಿ ಬಂದವರನ್ನು ಹಾಗೇ ಕಳುಹಿಸಬೇಡಿ.
ಇವುಗಳನ್ನು ಸೇವಿಸದಿರಿ
ದೀಪಾವಳಿ ಹಬ್ಬದಂದು ಕೇವಲ ಲಕ್ಷ್ಮಿ ದೇವಿಯನ್ನು ಮಾತ್ರವಲ್ಲ, ಈ ಶುಭ ದಿನದಂದು ಲಕ್ಷ್ಮಿ ದೇವಿಯೊಂದಿಗೆ ಗಣಪತಿ ದೇವನನ್ನು ಮತ್ತು ಸರಸ್ವತಿ ದೇವಿಯನ್ನೂ ಪೂಜಿಸಲಾಗುತ್ತದೆ. ಆದ್ದರಿಂದ ಈ ದಿನ ನೀವು ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದ ಅಮಲು ಪದಾರ್ಥಗಳಂತಹ ವಸ್ತುವನ್ನು, ಮಾಂಸಾಹಾರ ಇತ್ಯಾದಿ ವಸ್ತುಗಳನ್ನು ಸೇವಿಸಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಪತಿ ಪತ್ನಿಗೆ ಇದು ಕಡ್ಡಾಯ
ದೀಪಾವಳಿ ಹಬ್ಬದ ದಿನದಂದು ರಾತ್ರಿ ಪತಿ – ಪತ್ನಿಯಿಬ್ಬರೂ ಬ್ರಹ್ಮಚರ್ಯವನ್ನು ಕಡ್ಡಾಯವಾಗಿ ಅನುಸರಿಸಬೇಕು. ಒಂದು ವೇಳೆ ಶಾಸ್ತ್ರದಲ್ಲಿನ ಈ ನಿಯಮವನ್ನು ಅಲ್ಲಗಳೆದು, ಪತಿ ಪತ್ನಿ ಇಬ್ಬರೂ ಒಂದಾದರೆ ಮುಂದೊಂದು ದಿನ ಸಾಕಷ್ಟು ಸಮಸ್ಯೆಗಳಿಗೆ ಅವರು ಗುರಿಯಾಗಬೇಕಾಗುತ್ತದೆ. ಅದರಲ್ಲೂ ಇವರನ್ನು ಯಥೇಚ್ಛವಾಗಿ ಹಣಕಾಸಿನ ಸಮಸ್ಯೆಗಳು ಕಾಡತೊಡಗುತ್ತದೆ.
ಕೋಪದಿಂದ ದೂರವಿರಿ
ಯಾವ ವ್ಯಕ್ತಿ ಮನೆಯಲ್ಲಿ ಸದಸ್ಯರು ಸದಾ ಕೋಪದಿಂದ ಕೂಡಿರುತ್ತಾರೆಯೋ, ಅವರಲ್ಲಿ ಮನಸ್ಥಾಪಗಳು ಹೆಚ್ಚಾಗಿರುತ್ತದೆಯೋ ಅಂತಹ ಮನೆಗಳಲ್ಲಿ ಲಕ್ಷ್ಮಿ ದೇವಿ ಎಂದಿಗೂ ನೆಲೆಸುವುದಿಲ್ಲ. ಜಗಳ, ಮನಸ್ಥಾಪ ಹಾಗೂ ಕಿರಿಕಿರಿಯಿರುವ ಮನೆಗಳಲ್ಲಿ ಅವಳು ವಾಸವಾಗಿರಲು ಬಯಸುವುದಿಲ್ಲ. ಆದ್ದರಿಂದ ದೀಪಾವಳಿ ಹಬ್ಬದ ದಿನದಂದು ನೀವು ಯಾರ ಮೇಲೂ ಕೋಪಿಸಿಕೊಳ್ಳಬೇಡಿ. ಯಾರ ಮನಸ್ಸಿಗೂ ನೋವಾಗುವಂತಹ ಕೆಲಸವನ್ನು ಮಾಡಬೇಡಿ. ಹಾಗೂ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡಿರಬೇಡಿ. ಈ ತಪ್ಪನ್ನು ನೀವು ಮಾಡುವುದರಿಂದ ಸಂಪತ್ತಿನ ದೇವಿ ಲಕ್ಷ್ಮಿಯು ನಿಮ್ಮ ಮನೆಯನ್ನು ಬಿಟ್ಟು ಹೊರಟು ಹೋಗುತ್ತಾಳೆ.
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564







