ಮೇ 5ರ ಬುದ್ಧ ಪೂರ್ಣಿಮೆಯಂದು (Buddha Purnima) ವರ್ಷದ ಎರಡನೇ ಗ್ರಹಣ ಮತ್ತು ಮೊದಲ ಚಂದ್ರಗ್ರಹಣವು ಸಂಭವಿಸಲಿದೆ.
ಹೀಗಾಗಿ ಜಗತ್ತಿನಾದ್ಯಂತ ಖಗೋಳಶಾಸ್ತ್ರ ಉತ್ಸಾಹಿಗಳು ಇದನ್ನು ಕಣ್ಣುತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದಾಗ ಚಂದ್ರ ಗ್ರಹಣ ಸಂಭವಿಸುತ್ತವೆ. ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸುತ್ತಾನೆ.
ಈ ಗ್ರಹಣವು ಮೊದಲ ಸೂರ್ಯ ಗ್ರಹಣದ ಬಳಿಕ ನಿಖರವಾಗಿ 15 ದಿನಗಳ ನಂತರ ಸಂಭವಿಸಲಿದೆ. ಗ್ರಹಣವು ರಾತ್ರಿ 8.45 ಕ್ಕೆ ಪ್ರಾರಂಭವಾಗುತ್ತದೆ ಮತ್ತು ತಡರಾತ್ರಿ 1 ಗಂಟೆಗೆ ಕೊನೆಗೊಳ್ಳುತ್ತದೆ. ಚಂದ್ರಗ್ರಹಣಕ್ಕೆ 9 ಗಂಟೆಗಳ ಮೊದಲು ಅಶುದ್ಧ ಅವಧಿಯು ಪ್ರಾರಂಭವಾಗುತ್ತದೆ.
ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ, ಇದನ್ನು ಪರಿಗಣಿಸಲಾಗುವುದಿಲ್ಲ.ಈ ಗ್ರಹಣವು ಪೆನಂಬ್ರಾಲ್ ಅಂದರೆ ಭಾಗಶಃ ಚಂದ್ರಗ್ರಹಣವಾಗಿರುತ್ತದೆ. ಭಾರತದಲ್ಲಿ ಗೋಚರವಾಗುವುದಿಲ್ಲ. ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಕ್ಟಿಕಾದಲ್ಲಿ ಗ್ರಹಣ ಗೋಚರಿಸಲಿದೆ.