IPL 2022 | ಯಾರು ಈ ಕುಲ್ ದೀಪ್ ಸೇನ್….?
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ವೇಗಿ ಕುಲ್ ದೀಪ್ ಸೆನ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಕೊನೆಯ ಓವರ್ ನಲ್ಲಿ ಮ್ಯಾಜಿಕ್ ಮಾಡಿದ ಕುಲ್ ದೀಪ್ ರಾಯಲ್ಸ್ ತಂಡವನ್ನು ಗೆಲ್ಲಿಸಿಕೊಟ್ಟರು.
ಕೊನೆಯಲ್ಲಿ ಓವರ್ ನಲ್ಲಿ ಲಕ್ನೋಗೆ 15 ರನ್ ಗಳ ಅಗತ್ಯವಿದ್ದಾಗ ಬೌಲಿಂಗ್ ಮಾಡಲು ಬಂದ ಕುಲ್ ದೀಪ್ 12 ರನ್ ನೀಡಿದರು. ಕುಲ್ ದೀಪ್ ಅವರ ಈ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಅಂದಹಾಗೆ ಕುಲದೀಪ್ ಮಧ್ಯಪ್ರದೇಶ ರಾಜ್ಯದ ರೇವಾ ಜಿಲ್ಲೆಯ ಹರಿಹಾಪುರದವರು. ಅವರ ತಂದೆ ರಾಂಪಾಲ್ ಸೇನ್ ಸ್ಥಳೀಯವಾಗಿ ಸಣ್ಣ ಸಲೂನ್ ನಡೆಸುತ್ತಿದ್ದಾರೆ.
ಕುಲದೀಪ್ ಸೇನ್ ಅವರಿಗೆ ನಾಲ್ವರು ಒಡಹುಟ್ಟಿದವರಿದ್ದಾರೆ. ಚಿಕ್ಕಂದಿನಿಂದಲೇ ಕ್ರಿಕೆಟ್ ನಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಎಂಟನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು.
2018 ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದರು. ಇಲ್ಲಿಯವರೆಗೆ ಒಟ್ಟು 16 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಕುಲದೀಪ್ ಸೇನ್ 44 ವಿಕೆಟ್ ಪಡೆದಿದ್ದಾರೆ.
ಸೈಯದ್ ಮುಸ್ತಾಕ್ ಅಲಿ ಟ್ರೋಫಿಯ ಅಂಗವಾಗಿ ಮುಂಬೈ ವಿರುದ್ಧ ಚುಟುಕು ಕ್ರಿಕೆಟ್ ಗೆ ಕುಲದೀಪ್ ಪಾದಾರ್ಪಣೆ ಮಾಡಿದರು.
ಆ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿ 22 ರನ್ ನೀಡಿ ಒಂದು ವಿಕೆಟ್ ಪಡೆದರು. ಈ ಮಾದರಿಯಲ್ಲಿ 12 ವಿಕೆಟ್‌ಗಳನ್ನು ಪಡೆದ ಕುಲದೀಪ್ ಸೇನ್ ಅವರನ್ನು ಐಪಿಎಲ್ ಮೆಗಾ ಹರಾಜು-2022 ರ ಭಾಗವಾಗಿ ರಾಜಸ್ಥಾನ ರಾಯಲ್ಸ್ 20 ಲಕ್ಷಕ್ಕೆ ಕುಲ್ ದೀಪ್ ಅವರನ್ನು ಖರೀದಿಸಿದೆ.
ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡುವ ಅವಕಾಶ ಪಡೆದಿದ್ದ ಕುಲದೀಪ್ ಸೇನ್ 35 ರನ್ ನೀಡಿ ಒಂದು ವಿಕೆಟ್ ಪಡೆದರು. who is kuldeep-sen









