ಜೈಪುರ್: 5 ರಾಜ್ಯಗಳಿಗೆ ಚುನಾವಣೆ ನಡೆದಿದ್ದು, ಇಂದು ನಾಲ್ಕು ರಾಜ್ಯಗಳ ಫಲಿತಾಂಶ ಹೊರ ಬೀಳುತ್ತಿದ್ದು, ರಾಜಸ್ಥಾನದ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಗೆಲುವಿನ ನಗೆ ಬೀರುತ್ತಿದೆ. ಹೀಗಾಗಿ ಅಲ್ಲಿ ಸಿಎಂ ಸ್ಥಾನದ ಮಾತುಗಳು ಕೇಳಿ ಬರುತ್ತಿವೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಿಂದಿಕ್ಕಿ ಬಿಜೆಪಿ ಬಹುಮತದತ್ತ ಸಾಗುತ್ತಿದೆ. ಈಗಾಗಲೇ ರಾಜಸ್ಥಾನದಲ್ಲಿ ಸಿಎಂ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಚರ್ಚೆಯಾಗುತ್ತಿದೆ. ಸಾಕಷ್ಟು ಜನರ ಹೆಸರು ಪಟ್ಟಿಯಲ್ಲಿದ್ದರೂ ಮಹಂತ್ ಬಾಲಕನಾಥ್ (Mahant Balak Nath) ಹೆಸರು ಮುಂಚೂಣಿಯಲ್ಲಿದೆ. ಆಲ್ವಾರ್ ಕ್ಷೇತ್ರದ ಸಂಸದ ಮಹಂತ್ ಬಾಲಕನಾಥ್ ಅವರನ್ನು ಉತ್ತರ ಪ್ರದೇಶದ ಮಾದರಿಯಲ್ಲಿ ಸಿಎಂ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಯೋಗಿ ಆದಿತ್ಯನಾಥ್ ಮತ್ತು ಮಹಂತ್ ಬಾಲಕನಾಥ್ ಮಧ್ಯೆ ಸಾಮ್ಯತೆ ಇವೆ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ಸಿಎಂ ಆಗುವ ಮುನ್ನ ಐದಾರು ಬಾರಿ ಸಂಸದರಾಗಿದ್ದವರು. ಈಗ ಬಾಲಕನಾಥ್ ಕೂಡ ಸಂಸದರಾಗಿದ್ದಾರೆ.