ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ನಟಿ ಪವಿತ್ರಾ ಗೌಡ (Pavithra Gowda) ಸೇರಿದಂತೆ ಬಂಧಿತರಿಗೆ ಸಂಕಷ್ಟ ಶುರುವಾಗಿದೆ. ಪೊಲೀಸರು ಈಗಾಗಲೇ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಆರೋಗ್ಯ ಪರೀಕ್ಷೆ ಕೂಡ ನಡೆದಿದ್ದು, ಡಿಎನ್ ಎ ಟೆಸ್ಟ್ ಮಾಡಿಸಲಾಗಿದೆ.
ಜೂನ್ 19ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ್ಶನ್ (Darshan), ಪವಿತ್ರಾ ಗೌಡ ಸೇರಿದಂತೆ ಆರೋಪಿಗಳ ಡಿಎನ್ಎ ಟೆಸ್ಟ್ (DNA Test) ಮಾಡಿಸಲಾಗಿದೆ. 9 ಆರೋಪಿಗಳ ಸ್ಯಾಂಪಲ್ಸ್ ಪಡೆದುಕೊಳ್ಳಲಾಗಿದೆ. ಆರೋಪಿಗಳ ರಕ್ತ ಮತ್ತು ಕೂದಲಿನ ಮಾದರಿ ಸಂಗ್ರಹಿಸಲಾಗಿದೆ. ರೇಣುಕಾ ಸ್ವಾಮಿ ಹತ್ಯೆ ನಡೆದ ಸ್ಥಳದಲ್ಲಿ ಪತ್ತೆಯಾದ ಕೂದಲು ಹಾಗೂ ರಕ್ತದ ಮಾದರಿಯ ಜೊತೆ ಮ್ಯಾಚ್ ಆಗುತ್ತದೆಯೇ ಎಂಬುವುದನ್ನು ಪರೀಕ್ಷಿಸಲು ಈ ರೀತಿ ಮಾಡಲಾಗಿದೆ.
ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗಳು ಆರೋಪಿಗಳ ಸ್ಯಾಂಪಲ್ ಜೊತೆ ಮ್ಯಾಚ್ ಆದರೆ ಅದು ಪ್ರಮುಖ ಸಾಕ್ಷಿ ಆಗಿರಲಿದೆ. ಹೀಗಾಗಿಯೇ 9 ಆರೋಪಿಗಳ ಡಿಎನ್ ಎ ಪರೀಕ್ಷೆ ಮಾಡಲಾಗಿದೆ.