ಒಂದು ಕಾಲದಲ್ಲಿ ಉತ್ತಮ ಸ್ನೇಹಿತರಾಗಿದ್ದು, ಆನಂತರ ಜಗಳ ಮಾಡಿಕೊಂಡಿದ್ದ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ಮಧ್ಯೆ ಈಗ ಕಿರಿಕ್ ಇದೆ. ಈಗ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ವೇಳೆ ಉಮಾಪತಿ ಶ್ರೀನಿವಾಸ್ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ವಿರುದ್ಧ ಮಾತನಾಡಿದ್ದಾರೆ.
ನಮ್ಮ ಬೆರಳು ಬೇರೆಯವರ ಕಣ್ಣಿಗೆ ಚುಚ್ಚಿದರು ನೋವಾಗುತ್ತದೆ, ನಮ್ಮ ಕಣ್ಣಿಗೆ ಚುಚ್ಚಿದರೂ ನೋವಾಗುತ್ತದೆ. ಪೊಲೀಸ್ ಇಲಾಖೆ ಕುರಿತು ಜನಗಳಿಗೆ ನಂಬಿಕೆ ಬಂದಿದೆ. ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಮೊದಲು ನಾನು ಕೂಡ ದರ್ಶನ್ ಗುಂಪಲ್ಲಿ ಇದ್ದೆ. ದೇವರು ನನ್ನನ್ನು ಹೊರಗೆ ಕರೆದುಕೊಂಡು ಬಂದ. ಗಿಡವಾಗಿ ಬಗ್ಗದು ಮರವಾಗಿ ಬಗ್ಗುವುದಿಲ್ಲ. ತಪ್ಪು ಮಾಡಿದಾಗ ತಿದ್ದಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದಾರೆ.
ನಮ್ಮನ್ನು ನಂಬಿಕೊಂಡು ಬಂದವರ ಕೈ ಬಿಡಬಾರದು. ತಿನ್ನೋ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡಬಾರದು. ಎ2 ಸ್ವಲ್ಪ ಯೋಚಿಸಬೇಕಿತ್ತು. ಬದುಕಿಗೆ ತಾಳ್ಮೆ ತುಂಬಾ ಅವಶ್ಯ. ಹಳ್ಳಕ್ಕೆ ಬಿದ್ದಿದ್ದಾರೆ, ಆಳಿಗೊಂದು ಕಲ್ಲು ಎಸೆಯಬಾರದು. ಅದನ್ನು ನಂಬಿದವನು ನಾನು ಎಂದು ದರ್ಶನ್ ಪರ ಮೃದು ಧೋರಣೆ ತಾಳಿದ ಮಾತುಗಳನ್ನಾಡಿದ್ದಾರೆ.