ನಟ ಅನಂತ್ ನಾಗ್ (Anant Nag) ಚಿತ್ರರಂಗದಲ್ಲಿ 50 ವರ್ಷಗಳನ್ನು ಕಳೆದಿದ್ದಾರೆ.
ಈ ಅವಧಿಯಲ್ಲಿ ನಾಯಕನ ನಟನೊಂದಿಗೆ ಹಲವಾರು ಭಿನ್ನ -ವಿಭಿನ್ನ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ಐವತ್ತು ವರ್ಷಗಳಲ್ಲಿ ಹಲವು ಭಿನ್ನ-ಭಿನ್ನ ಪಾತ್ರಗಳಾಗಿ ಪ್ರೇಕ್ಷಕರ ಎದುರು ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್ ಅತ್ಯುತ್ತಮ ನಟರಾಗಿರುವ ಜೊತೆಗೆ ಒಳ್ಳೆಯ ಹಾಡುಗಾರರೂ ಅವರಾಗಿದ್ದಾರೆ. ಅವರು ಉತ್ತಮವಾಗಿ ಹಾಡನ್ನು ಹಾಡುತ್ತಾರೆ.
ಬಾಲ್ಯವನ್ನು ಮಠದಲ್ಲಿ ಕಳೆದ ಅನಂತ್ ನಾಗ್ ಅಲ್ಲಿಯೇ ತುಸು ಸಂಗೀತಾಭ್ಯಾಸವನ್ನು ಮಾಡಿದ್ದರು. ಒಳ್ಳೆಯ ಹಾಡುಗಾರರಾಗಿದ್ದರೂ ಸಿನಿಮಾಗಳಲ್ಲಿ ಹಾಡಲಿಲ್ಲ ಎಂಬುವುದು ಅಭಿಮಾನಿಗಳ ಮಾತಾಗಿದೆ.








