ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದಲೇ ಪತಿಯ ಹತ್ಯೆಯಾಗಿರುವ ಘಟನೆ ನಡೆದಿದೆ.
ಈ ಘಟನೆ ಮಾಗಡಿ ತಾಲೂಕಿನ ಹೂಜಗಲ್ಲು ಬೆಟ್ಟದಲ್ಲಿ ನಡೆದಿದೆ. ದಿವ್ಯಾ (32) ಗಂಡನಿಂದಲೇ ಕೊಲೆಯಾದ ಮಹಿಳೆ. ಉಮೇಶ್ ಪತ್ನಿಯನ್ನು ಹತ್ಯೆಗೈದು ಪರಾರಿಯಾಗಿರುವ ಪತಿ ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆಯಲು ದಂಪತಿ ಮುಂದಾಗಿದ್ದರು. ಹೀಗಾಗಿ ಮಾಗಡಿ ಕೋರ್ಟ್ ಗೆ ಮಂಗಳವಾರ ದಂಪತಿ ಹಾಜರಾಗಿದ್ದರು.
ಆನಂತರ ಕತೆ ಕಟ್ಟಿ ಪತ್ನಿಯನ್ನು ದೇವಸ್ಥಾನಕ್ಕೆಂದು ಹೂಜಗಲ್ಲು ಬೆಟ್ಟಕ್ಕೆ ಕರೆದೊಯ್ದ ಉಮೇಶ್, ಪೂಜೆ ಮಾಡುವ ಸಂದರ್ಭದಲ್ಲಿ ಪತ್ನಿ ದಿವ್ಯಾಳ ಹತ್ಯೆ ಮಾಡಿದ್ದಾನೆ. ಶವವನ್ನು ಚೀಲೂರು ಅರಣ್ಯ ಪ್ರದೇಶದಲ್ಲಿ ಎಸೆದು ನಂತರ ಪರಾರಿಯಾಗಿದ್ದಾನೆ. ಈ ಕುರಿತು ಐವರ ಮೇಲೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೃತ್ಯವೆಸಗಿ ಪರಾರಿಯಾಗಿದ್ದ ಪತಿ ಉಮೇಶ್ ಸೇರಿ ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.