ಇನಿಯನ ಜೊತೆ ಸೇರಿ ತಾಳಿಕಟ್ಟಿದವನ ಕಥೆಯನ್ನೇ ಮುಗಿಸಿದ ರಾಕ್ಷಸಿ..!
ಬೆಂಗಳೂರು: ಪತ್ನಿಯೊಬ್ಬಳು ತನ್ನ ಪತಿಯ ಹತ್ಯೆಗೆ ಸುಪಾರಿ ಕೊಟ್ಟು ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ತನ್ನ ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಲೆ ಮಾಡಿಸಿದ್ಧಾಳೆ. ಮೊಹಮ್ಮದ್ ಶಫಿ ಕೊಲೆಯಾದ ದುರ್ದೈವಿಯಾಗಿದ್ದಾನೆ.
ಮೊಹಮ್ಮದ್ ಶಫಿ ಪತ್ನಿ ತಸ್ಲೀಂ ಎಂಬಾಕೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅಪ್ಸರ್ ಖಾನ್ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಬಳಿಕ ರಿಯಲ್ ಎಸ್ಟೇಟ್ ನಲ್ಲಿ ಮೊಹಮ್ಮದ್ ಶಫಿ ಮೂಲಕ ಅಪ್ಸರ್ ಖಾನ್ ಬಳಿ 75 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿದ್ದಳು. ಈ ಹಣಕ್ಕೆ 5 ಲಕ್ಷ ಕಮಿಷನ್ ಕೊಡೋದಾಗಿ ಶಫಿಗೆ ಭರವಸೆಯನ್ನೂ ನೀಡಿದ್ದ.
ಆದರೆ ಶಫಿಗೆ ಯಾವುದೇ ಹಣ ನೀಡಿರಲಿಲ್ಲ. ಇದೇ ವಿಚಾರವಾಗಿ ಗಲಾಟೆಯೂ ನಡೆದಿತ್ತು. ಬಳಿಕ ಶಫಿ ಪತ್ನಿ ತಸ್ಲಿಂ ತನ್ನ ಪ್ರಿಯತಮ ಅಫ್ಸರ್ ಜೊತೆಗೆ ಸೇರಿ ಗಂಡನ ಕಥೆ ಮುಗಿಸೋದಕ್ಕೆ ಸ್ಕೆಚ್ ಹಾಕಿದ್ದಾರೆ. ಅದ್ರಂತೆ ಕೊಲೆಗೆ ಸುಪಾರಿ ನೀಡಿದ್ದಾರೆ. ಪ್ಲಾನ್ ಪ್ರಕಾರ ಶಫಿಗೆ ಹಣ ಕೊಡುವುದಾಗಿ ಹೇಳಿ ಗುರಪ್ಪನ ಪಾಳ್ಯದ ಬಳಿ ಕರೆಸಿದ್ದಾರೆ. ಆತ ಬರುತ್ತಿದ್ದಂತೆಯೇ ನಡು ರಸ್ತೆಯಲ್ಲಿ ಆತನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು 9 ಜನರನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಹಿರಂಗವಾಗಿದೆ.
ಯೂಟ್ಯೂಬ್ ನೋಡಿ ತಲೆಗೆ ಬೆಂಕಿ ಹಚ್ಚಿಕೊಂಡ 12ರ ಬಾಲಕ ಸಾವು..!