ಗಂಡನನ್ನೇ ಬಲಿಪಡೆಯಿತು ತಂಗಿಯ ಪ್ರಿಯಕರನೊಂದಗಿನ ಸಾಂಗತ್ಯ !!
ದೊಡ್ಡಬಳ್ಳಾಪುರ: ಮಾರ್ಚ್ 23ರಂದು ಪ್ರಿಯಕರನ ಜೋತೆ ಸೇರಿ ಪತ್ನಿ, ಪತಿಯನ್ನು ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ.
ಹನುಮಯ್ಯ (35) ಕೊಲೆಯಾದ ಮೃತ ದುರ್ದೈವಿ. ಹೆಂಡತಿ ಎ.ವಿ. ಭಾಗ್ಯ, ಪ್ರಿಯಕರ ನಾಗೇಶ್ ಕೊಲೆ ಆರೋಪಿಗಳು. ಭಾಗ್ಯ ಮತ್ತು ಪ್ರಿಯಕರ ನಾಗೇಶ ಇಬ್ಬರೂ ಸೇರಿಕೊಂಡು ಗಂಡ ಹನುಮಯ್ಯ ಮಲಗಿದಾಗ, ತೆಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳು ಜೈಲಿನ ಕಂಬಿ ಎಣೆಸುತ್ತಿದ್ದಾರೆ.
ಪ್ರಕರಣ: ಹನುಮಯ್ಯ ಭಾಗ್ಯಳನ್ನು 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಹನುಮಯ್ಯ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಇಬ್ಬರನ್ನು ವಿದ್ಯಾಭ್ಯಾಸಕ್ಕಾಗಿ ಹಾಸ್ಟೇಲ್ ನಲ್ಲಿ ಇಟ್ಟು ಓದಿಸುತ್ತಿದ್ದರು. ಮನೆಯಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೇ ಇರುತ್ತಿದ್ದರು.
ಪತಿ ಹನುಮಯ್ಯ ಮದ್ಯವೆಸನಿಯಾಗಿದ್ದು, ಈ ಸಂಬಂಧ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಭಾಗ್ಯ ನಿಧಾನವಾಗಿ ತಂಗಿಯ ಪ್ರಿಯಕರ ನಾಗೇಶ್ ನ ಮೇಲೆ ಮನಸ್ಸು ಮಾಡಿದ್ದಳು. ಇದು ಅಕ್ರಮ ಸಂಬಂಧಕ್ಕೆ ಕಾರಣವಾಯಿತು. ನಾಗೇಶ್ ಮತ್ತು ಭಾಗ್ಯಳ ಮಧ್ಯೆ ಲವ್ವಿ ಡವ್ವಿ ಶುರುವಾಗಿದ್ದು, ಕದ್ದು ಮುಚ್ಚಿ ಭೇಟಿ, ಅಕ್ರಮ ಸೇರುವಿಕೆ ಶುರುವಾಗಿದೆ.
ಈ ವಿಷಯ ಪತಿ ಹನುಮಯ್ಯನಿಗೆ ತಿಳಿದಿದೆ. ಆದಕಾರಣ ಇಬ್ಬರ ನಡುವೆ ಜಗಳವಾಗಿ, ದೂರವಾಗಿದ್ದರು. ಇದನ್ನು ತಿಳಿದ ಸಂಬಂಧಿಕರು ರಾಜಿ ಸಂಧಾನ ಮಾಡಿ ಮತ್ತೆ ಇಬ್ಬರನ್ನು ಒಂದುಗೂಡಿಸಿದ್ದರು. ಆದರೆ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ ಭಾಗ್ಯ, ಪ್ರಿಯಕರನೊಂದಿಗೆ ಚಕ್ಕಂದವಾಡಲು ತವರುಗೆ ಬರುತ್ತಿದ್ದಳು.
ಪರಪುರುಷನ ಸಾಂಗತ್ಯ ಬಯಸಿದ್ದ ಭಾಗ್ಯಾಳಿಗೆ ಅದೇನು ತಿಳಿಯಿತೊ ಏನು ಗಂಡನನ್ನು ಕೊಲೆ ಮಾಡಲು ನಿಶ್ಚಯಿಸಿದಳು. ಇದಕ್ಕೆ ಪ್ರಿಯಕರನ ಸಹಾಯ ಪಡಿದಿದ್ದಳು. ಹನುಮಯ್ಯನನ್ನು ಕೊಲೆ ಮಾಡಲು ಪ್ರಿಯಕರ ನಾಗೇಶ್ ಜೊತೆ ಆತನ ಸ್ನೇಹಿತ ನಾರಾಯಣಸ್ವಾಮಿ ಕೂಡಾ ಕೈ ಜೋಡಿಸಿದ್ದನು.
ಮೂವರು ಸೇರಿ ಹನುಮಯ್ಯನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ನಂತರ ಭಾಗ್ಯಾ ಒಬ್ಬಳನ್ನು ಮನೆಯಲ್ಲಿ ಬಿಟ್ಟು ನಾಗೇಶ್ ಮತ್ತು ನಾರಾಯಣಸ್ವಾಮಿ ಪರಾರಿಯಾಗಿದ್ದರು. ಮರುದಿನ ಬೆಳಗ್ಗೆ ಪಕ್ಕದ ಮನೆಯ ಹುಡುಗಿ ಸ್ನಾನಕ್ಕೆ ಬಂದಾಗಲೇ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.