ಕಾಡಾನೆ ದಾಳಿಯಿಂದಾಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದಾಳಿಯಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಶನಿವಾರ ಬೆಳಿಗ್ಗೆ ಕಾಡಾನೆ ಓರ್ವ ಮಹಿಳೆಯನ್ನು ಕೊಂದು ಹಾಕಿತ್ತು. ಇದಾದ ನಂತರ ರಾತ್ರಿ ವೇಳೆ ಇಬ್ಬರನ್ನು ತುಳಿದು ಕೊಂದಿದೆ. ಮೂರು ದಿನಗಳ ಹಿಂದೆ ಕೋರ್ಬಾ ಅರಣ್ಯ ವಿಭಾಗದ ಕರ್ತಾಲಾ ಅರಣ್ಯ ಪ್ರದೇಶದಲ್ಲಿ ಎಂಟು ಆನೆಗಳ ಗುಂಪು ತಿರುಗಾಡುತ್ತಿತ್ತು.
ಆದರೆ, ಒಂದು ಆನೆ ಗುಂಪಿನಿಂದ ಬೇರ್ಪಟ್ಟು ಕಂಗಾಲಾಗಿದೆ. ಹೀಗಾಗಿ ಕಣ್ಣಿಗೆ ಬಿದ್ದವರ ಮೇಲೆ ದಾಳಿ ನಡೆಸುತ್ತಿದೆ. ಬುಧವಾರ ರಾತ್ರಿಯೇ ರಾಲಿಯಾ ಗ್ರಾಮಕ್ಕೆ ನುಗ್ಗಿದ್ದ ಆನೆ ವಾಕಿಂಗ್ಗೆ ತೆರಳಿದ್ದ ಗಾಯತ್ರಿ ರಾಥೋಡ್ ಎಂಬ ಮಹಿಳೆಯನ್ನು ತುಳಿದು ಕೊಂದಿದೆ. ಅಲ್ಲಿಂದ ಪಕ್ಕದಲ್ಲಿನ ಖೋದ್ರಿ ಗ್ರಾಮಕ್ಕೆ ನುಗ್ಗಿ ಐದು ಜಾನುವಾರುಗಳನ್ನು ಕೊಂದಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.