ವಿಂಬಲ್ಡನ್ 2021 – 10ನೇ ಸೆಮಿಫೈನಲ್ ಪ್ರವೇಶಿಸಿದ ನೊವಾಕ್ ಜಾಕೊವಿಕ್
ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ವಿಶ್ವದ ನಂಬರ್ ವನ್ ಆಟಗಾರ ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ ನ ಸೆಂಟರ್ ಕೋರ್ಟ್ ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೊವಾಕ್ ಜಾಕೊವಿಕ್ ಅವರು 6-3, 6-4, 6-ರಿಂದ ಹಂಗೇರಿ ಮಾರ್ಟನ್ ಫುಸ್ಕೊವಿಕ್ ಅವರನ್ನು ಸೋಲಿಸಿದ್ರು. ಈ ಗೆಲುವಿನೊಂದಿಗೆ ನೊವಾಕ್ ಜಾಕೊವಿಕ್ ಅವರು ವಿಂಬಲ್ಡನ್ ಟೂರ್ನಿಯಲ್ಲಿ ಹತ್ತನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಈಗಾಗಲೇ ನೊವಾಕ್ ಜಾಕೊವಿಕ್ ಅವರು 19 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇದರಲ್ಲಿ ಐದು ಬಾರಿ ವಿಂಬಲ್ಡನ್ ಪ್ರಸಸ್ತಿ ಗೆದ್ದುಕೊಂಡಿದ್ದಾರೆ. ಹಾಗೇ ಎರಡು ಬಾರಿ ಫ್ರೆಂಚ್ ಓಪನ್, ಮೂರು ಬಾರಿ ಯುಎಸ್ ಓಪನ್ ಮತ್ತು 9 ಬಾರಿ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇದೀಗ ನೊವಾಕ್ ಜಾಕೊವಿಕ್ ಅವರು ವಿಂಬಲ್ಡನ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೆ 20ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದು ಫೆಡರರ್ ಮತ್ತು ನಡಾಲ್ ಅವರ ದಾಖಲೆಯ ಸಾಧನೆಗಳನ್ನು ಸಮಗೊಳಿಸುವ ಹಾದಿಯಲ್ಲಿದ್ದಾರೆ.
ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾದ ಡೆನಿಸ್ ಶಪೊವಾಲೊವ್ ಅವರು 6-4, 3-6, 5-7, 6-1, 6-4ರಿಂದ ರಷ್ಯಾದ ಕರೇನ್ ಖಾಚ್ನೊವಾ ಅವರನ್ನು ಪರಾಭವಗೊಳಿಸಿದ್ರು. ಸೆಮಿಫೈನಲ್ ನಲ್ಲಿ ಡೆನಿಸ್ ಶಪೊವಾಲೊವ್ ಮತ್ತು ನೊವಾಕ್ ಜಾಕೊವಿಕ್ ಹೊರಾಟ ನಡೆಸಲಿದ್ದಾರೆ.
ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಟಲಿಯ ಮ್ಯಾಟೊ ಬ್ಯಾರೆಟಿನಿ ಅವರು 6-3, 5-7, 7-5, 6-3ರಿಂದ ಕೆನಡಾದ ಫೆಲಿಕ್ಸ್ ಔಗರ್ ಆಲಿಸಿಮೆ ಅವರನ್ನು ಸೋಲಿಸಿದ್ರು.