ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಕೊರೋನಾ ವೈರಸ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ ?

1 min read
corona virus

ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಕೊರೋನಾ ವೈರಸ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ ?

ಆಯುರ್ವೇದದ ಪ್ರಕಾರ, ಶುಂಠಿಯು ಆಹಾರದಲ್ಲಿ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ರೋಗಗಳಿಂದ ದೂರವಿರಲು ಸಹಕಾರಿಯಾಗಿದೆ. ಬದಲಾಗುತ್ತಿರುವ ಋತುವಿನಲ್ಲಿ ಶುಂಠಿ ಆರೋಗ್ಯಕ್ಕೆ ಹೇಗೆ ವರದಾನವಾಗಿದೆ ಎಂದು ಇಲ್ಲಿ ತಿಳಿಸಲಾಗಿದೆ

ಗಂಟಲು ನೋವು ಕೊರೋನಾ ವೈರಸ್ ಸೋಂಕಿನ ಲಕ್ಷಣವಾಗಿದೆ. ಆದ್ದರಿಂದ, ನಿಮಗೆ ಗಂಟಲು ನೋವು ಸಮಸ್ಯೆ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.
Saakshatv healthtips ginger tea

ಗಂಟಲು ನೋವಿಗೆ ಮನೆಯಲ್ಲೇ ಮಾಡಬಹುದಾದ ಚಿಕಿತ್ಸೆಯ ಬಗ್ಗೆ ತಿಳಿದಿರಲಿ

1. ಒಂದು ಕಪ್ ನೀರಿನಲ್ಲಿ 4 ರಿಂದ 5 ಕರಿಮೆಣಸು ಮತ್ತು 5 ತುಳಸಿ‌ ಎಲೆಗಳನ್ನು ಕುದಿಸಿ ಕಷಾಯ ಮಾಡಿ ಮತ್ತು ಈ ಕಷಾಯವನ್ನು ಕುಡಿಯಿರಿ. ರಾತ್ರಿ ನಿದ್ದೆ ಮಾಡುವ ಮೊದಲು ಇದನ್ನು ಕುಡಿಯುವುದು ಪ್ರಯೋಜನಕಾರಿಯಾಗಿದೆ.

2. ಗಂಟಲು ನೋವಿಗೆ ಉಗುರು ಬಿಸಿ ನೀರನ್ನು ಕುಡಿಯಿರಿ. ಉಗುರು ಬಿಸಿ ನೀರಿನಲ್ಲಿ ವಿನೆಗರ್ ಸೇರಿಸುವ ಮೂಲಕ ಗಾರ್ಗ್ಲಿಂಗ್ ಮಾಡುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ ಮತ್ತು ಗಂಟಲಿನ ಸೋಂಕಿಗೆ ಕೂಡ ಪರಿಣಾಮಕಾರಿಯಾಗಿದೆ . ಇದಲ್ಲದೆ, ಉಗುರು ಬಿಸಿ ನೀರಿಗೆ ಉಪ್ಪನ್ನು ಬೆರೆಸಿ ಗಾರ್ಗ್ಲಿಂಗ್ ಮಾಡುವುದು ಕೂಡ ಉತ್ತಮ ಚಿಕಿತ್ಸೆಯಾಗಿದೆ.

3. ಗಂಟಲು ‌ನೋವಿಗೆ ಕರಿಮೆಣಸನ್ನು ತುಪ್ಪದೊಂದಿಗೆ ಪುಡಿ ಮಾಡಿ ತೆಗೆದುಕೊಳ್ಳಿ. ಇದು ಸಹ ಪ್ರಯೋಜನಕಾರಿಯಾಗಿದೆ. ಅಲ್ಲದೆ, ಕರಿಮೆಣಸನ್ನು 2 ಬಾದಾಮಿಗಳೊಂದಿಗೆ ರುಬ್ಬಿ ಅದನ್ನು ತೆಗೆದುಕೊಳ್ಳುವುದರಿಂದ ಗಂಟಲಿನ ಕಾಯಿಲೆಗಳು ಗುಣವಾಗುತ್ತವೆ.

ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಸೇವನೆಯ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳಿ.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

#kitchen #coronavirus

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd