ಜನನಾಂಗಕ್ಕೆ ಮೊಳೆ, ಕಲ್ಲು ತುರುಕಿ ವಿಕೃತಿ : ಸೈನಿಕರ ಅಟ್ಟಹಾಸ
ಅಡಿಸ್ ಅಬಾಬ : ಮಹಿಳೆಯನ್ನ ಅಪಹರಿಸಿ 11 ದಿನಗಳ ಕಾಲ 23 ಮಂದಿ ಯೋಧರು ಆಕೆಯ ಮೇಲೆ ಅತ್ಯಚಾರ ಎಸಗಿರುವ ಘಟನೆ ಇಥಿಯೋಪಿಯಾದ ಟೈಗ್ರೇ ವಲಯದಲ್ಲಿ ನಡೆದಿದೆ.
ಅಲ್ಲದೆ ಯೋಧರು ನಿರಂತರವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಜನನಾಂಗಕ್ಕೆ ಮೊಳೆ, ಕಲ್ಲು ಮತ್ತು ಇತರೆ ವಸ್ತುಗಳನ್ನು ತುರುಕಿ ವಿಕೃತಿ ಮೆರೆದಿದ್ದಾರೆ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಅಡಿಗ್ರಾತ್ ನಗರಕ್ಕೆ ಮಿನಿಬಸ್ ನಲ್ಲಿ ತೆರಳುತ್ತಿದ್ದ ವೇಳೆ ಸಂತ್ರಸ್ತೆ ಮಹಿಳೆಯನ್ನ ಯೋಧರು ಕೆಳಗಿಸಿದ್ದು, ಅಲ್ಲಿಂದ ಆಕೆಯನ್ನ ಕಟ್ಟಿ ದಾರಿಯುದ್ದಕ್ಕೂ ಮೆರವಣಿಗೆ ಮಾಡಿ ನಿರ್ಜನ ಪ್ರದೇಶದಲ್ಲಿದ್ದ ತಮ್ಮ ಶಿಬಿರಕ್ಕೆ ಕರೆದೊಯ್ದಿದ್ದಾರೆ.
ಅಲ್ಲಿ ಆಕೆಯನ್ನು 11 ದಿನಗಳ ಕಾಲ ಬಂಧಿಯಾಗಿಟ್ಟುಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಕ್ರೂರ ಮೃಗಗಳಂತೆ ಮಹಿಳೆಯ ಜನನಾಂಗಕ್ಕೆ ಮೊಳೆ, ಕಲ್ಲುಗಳನ್ನು ತುರುಕಿ ಹಿಂಸಿಸಿದ್ದಾರಂತೆ. ಬಳಿಕ ಆಕೆಯನ್ನ ಪೊದೆಯೊಂದರಲ್ಲಿ ಬಿಸಾಡಿ ಹೋಗಿದ್ದಾರೆ.
ಪ್ರಜ್ಞೆಹೀನ ಸ್ಥಿತಿಯಲ್ಲಿ ಆಕೆಯನ್ನ ನೋಡಿದ ಗ್ರಾಮಸ್ಥರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ವೈದ್ಯರು ರಾಯಿಟರ್ಸ್ ಮಾಧ್ಯಮಕ್ಕೆ ಮಹಿಳೆಯ ಜನನಾಂಗದಲ್ಲಿದ್ದ ರಕ್ತದ ಕಲೆಯುಳ್ಳ ಕಲ್ಲು ಮತ್ತು 3 ಇಂಚಿನ ಮೊಳೆ ತೋರಿಸಿದ್ದಾರೆ.
ಇನ್ನು ಕಳೆದ ವರ್ಷ ನವೆಂಬರ್ನಲ್ಲಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್, ಪ್ರಾದೇಶಿಕ ನಾಯಕರ ವಿರುದ್ಧ ಸರ್ಕಾರದ ಆಕ್ರಮಣವನ್ನು ಘೋಷಿಸಿದ ಬಳಿಕ ನೂರಾರು ಮಹಿಳೆಯರು ಇಥೋಪಿಯನ್ ಅಥವಾ ಮಿತ್ರರಾಷ್ಟ್ರ ಎರಿಟ್ರಿಯನ್ ಸೈನಿಕರ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.