ಗಂಡನನ್ನ ಬಿಟ್ಟು ತವರು ಸೇರಿದ್ದ ಯುವತಿಗೆ ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟ ಕುಟುಂಬಸ್ಥರು
19 ವರ್ಷದ ವಿವಾಹಿತೆಯೊಬ್ಬಳು ತನ್ನ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದರಿಂದ ಆಕೆಯ ಮನೆಯರೇ ಸಾರ್ವಜನಿಕರ ಎದುರಲ್ಲೇ ಆಕೆಯನ್ನ ಮರಕ್ಕೆ ಕಟ್ಟಿಹಾಕಿ ಕೋಲಿನಿಂದ ಹೊಡೆದು , ಬಾಯಿಗೆ ಬಂದ ಹಾಗೆ ಬೈದು ವಿಕೃತಿ ಮೆರೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ..
ಕೂದಲಿನಿಂದ ಹಿಡಿದೆಳೆದು ಮರಕ್ಕೆ ಕಟ್ಟಿ ಹಾಕಿ ಕೋಲಿನಿಂದ ಆಕೆಯ ತಂದೆ ಹಾಗೂ ಸೋದರ ಸಂಬಧಿಗಳೇ ಥಳಿಸಿದ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಈ ಘಟನೆ ಸಂಬಂಧ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ನೆಟ್ಟಿಗರನ್ನ ಕೆರಳಿಸಿದೆ. ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಈಕೆ ಪತಿಯ ಮನೆಯನ್ನ ತ್ಯಜಿಸಿ ಬಂದಿದ್ದಳು ಎನ್ನಲಾಗಿದೆ.
ಕರ್ಮ : ಮರಕ್ಕೆ ನಿರಂತರವಾಗಿ ಒದ್ದ – ಮುಂದಾಗಿದ್ದು ಅನಾಹುತ – VIDEO VIRAL
ಹಲ್ಲೆಕೋರರೇ ಈ ವಿಡಿಯೋವನ್ನ ರೆಕಾರ್ಡ್ ಮಾಡಿದ್ದು ಇದರಲ್ಲಿ ಓರ್ವ, ಅಳೋದನ್ನ ನಿಲ್ಲಿಸು, ಇನ್ಮುಂದೆ ಹೀಗೆ ವಾಪಸ್ ಬರ್ತೀಯಾಎಂದು ಕೇಳಿದ್ದಾನೆ.. ಇನ್ನೊಬ್ಬ ಆಕೆಗೆ ಕೋಲಿನಿಂದ ನಿರಂತರವಾಗಿ ಬಾರಿಸಿದ್ದಾನೆ. ಅಲ್ಲದೇ ಆಕೆ ಚಿತ್ರಹಿಂಸೆ ಪಡುವುದನ್ನ ನೋಡಿ ನಕ್ಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ..
ಜೂನ್ 28ರಂದು ಈ ಘಟನೆ ನಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಪ್ರಕರಣ ವೈರಲ್ ಆಗಿದೆ.. ಇದು ಪೊಲೀಸರ ಗಮನಕ್ಕೂ ಬಂದಿದ್ದು, ತನಿಖೆ ಕೈಗೆತ್ತಿಕೊಂಡು ಸಂತ್ರಸ್ತ ಯುವತಿಯನ್ನ ವಿಚಾರಣೆ ನಡೆಸಿದ್ದಾರೆ.. ಆಕೆ ಕೊಟ್ಟ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆಕೆಯ ತಂದೆ ಹಾಗೂ ಸೋಹೋದರರನ್ನ ಬಂಧಿಸಿದ್ದಾರೆ.