Women’s IPL : 951 ಕೋಟಿಗೆ ಮಹಿಳಾ IPL ಪ್ರಸಾರ ವಯೋಕಾಮ್ 18 ಪಾಲು…
ಮುಂಬರುವ ಮಹಿಳಾ IPL ನ ಮಾಧ್ಯಮ ಹಕ್ಕುಗಳ ಬಿಡ್ ನಲ್ಲಿ ವಯೋಕಾಮ್ 18 – ಐದು ವರ್ಷಗಳ ಕಾಲ 951 ಕೋಟಿ ರೂ.ಗಳಿಗೆ ವಶಮಾಡಿಕೊಂಡಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಪ್ರಕಟಿಸಿದೆ. ಸೋಮವಾರ ಮುಂಬೈನಲ್ಲಿ ಟಿ20 ಲೀಗ್ ಗಾಗಿ ಹರಾಜನ್ನು ಕ್ರಿಕೆಟ್ ಮಂಡಳಿ ನಡೆಸಿತು.
ವಯಾಕಾಮ್ 951 ಕೋಟಿ ರೂ ನೀಡಿ ಮುಂದಿನ 5 ವರ್ಷಕ್ಕೆ (2023-27) ಕೊಂಡುಕೊಂಡಿದ್ದು, ಪ್ರತಿ ಪಂದ್ಯಕ್ಕೆ 7.09 ಕೋಟಿ ನೀಡಲು ಮುಂದಾಗಿದೆ. ಮಹಿಳಾ ಐಪಿಎಲ್ ಮಾಧ್ಯಮ ಹಕ್ಕುಗಳಿಗಾಗಿ ಇಂದಿನ ಹರಾಜು ಮತ್ತೊಂದು ಐತಿಹಾಸಿಕ ಆದೇಶವನ್ನ ಸೂಚಿಸುತ್ತದೆ,” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿ ನಡೆಸುವ ಮಹತ್ವಾಕಾಂಕ್ಷೆಯ ಮಹಿಳಾ IPL ಮಾರ್ಚ್ 2023 ರ ಲ್ಲಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.
Women’s IPL : Viacom18 bags Women’s IPL media rights for Rs. 951 crore: Jay Shah