Women’s Premier League : ಮೊದಲ ಸೀಸನ್ ಹರಾಜಿ 409 ಆಟಗಾರರು ಆಯ್ಕೆ…
ಮಹಿಳಾ ಪ್ರೀಮಿಯರ್ ಲೀಗ್ (WPL) ನ ಮೊದಲ ಸೀಸನ್ ಗಾಗಿ 409 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, ಫೆಬ್ರವರಿ 13 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ವಿಶ್ವದಾದ್ಯಂತ 1525 ಆಟಗಾರರು ಹರಾಜಿಗೆ ನೊಂದಾಯಿಸಿಕೊಂಡಿದ್ದರು. ಈ ಪೈಕಿ 246 ಭಾರತೀಯ ಹಾಗೂ 163 ವಿದೇಶಿ ಆಟಗಾರರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ 15 ದೇಶದ ಆಟಗಾರರು ಸೇರ್ಪಡೆಯಾಗಿದ್ದಾರೆ.
ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ಅಲಿಸ್ಸಾ ಹೀಲಿ ಮತ್ತು ಎಲ್ಲಿಸ್ ಪೆರ್ರಿ ಸೇರಿದಂತೆ 24 ಆಟಗಾರರಿಗೆ ಅತ್ಯಧಿಕ ಮೂಲ ಬೆಲೆ 50 ಲಕ್ಷ ರೂ ನಿಗದಿಪಡಿಸಲಾಗಿದೆ. ಇವರಲ್ಲಿ 10 ಭಾರತೀಯ ಹಾಗೂ 14 ವಿದೇಶಿ ಆಟಗಾರರಿದ್ದಾರೆ.
30 ಆಟಗಾರರು ಮೂಲ ಬೆಲೆಯನ್ನ 40 ಲಕ್ಷಕ್ಕೆ ನಿಗದಿ ಪಡಿಸಲಾಗಿದ್ದು, ಇದರಲ್ಲಿ ಭಾರತದ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ವಿಜೇತ ತಂಡದ ಎಲ್ಲಾ ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ.
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಒಂದು ದಿನದ ಮೆಗಾ ಹರಾಜು ನಡೆಯಲಿದೆ. ಹರಾಜಿನಲ್ಲಿ ಆಟಗಾರನನ್ನು ಖರೀದಿಸಲು WPL ತಂಡವು 12 ಕೋಟಿ ರೂಪಾಯಿಗಳನ್ನು ಪಡೆಯುತ್ತದೆ. ಪ್ರತಿ ವರ್ಷ ಪರ್ಸ್‌ನಲ್ಲಿ 1.5 ಕೋಟಿ ರೂಪಾಯಿ ಹೆಚ್ಚಳವಾಗಲಿದೆ. ಟೂರ್ನಿಯಲ್ಲಿ ಗೆದ್ದ ತಂಡಕ್ಕೆ 6 ಕೋಟಿ, ರನ್ನರ್ ಅಪ್ ತಂಡಕ್ಕೆ 3 ಕೋಟಿ ಹಾಗೂ ತೃತೀಯ ಸ್ಥಾನ ಪಡೆಯುವ ತಂಡಕ್ಕೆ 1 ಕೋಟಿ ನೀಡಲಾಗುವುದು.
Women’s Premier League: 409 players selected in first season auction