ನವದೆಹಲಿ : ನಾರಿಶಕ್ತಿ ವಂದನ್ ಅಧಿನಿಯಮಕ್ಕೆ (Nari Shakti Vandan Adhiniyam) ಲೋಕಸಭೆ (Lok Sabaha) ಅನುಮೋದನೆ ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಚರ್ಚೆ ನಡೆದಿತ್ತು. ನಂತರ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33ಮೀಸಲಾತಿ (33% women reservation) ನೀಡುವ ಮಸೂದೆ ಪರ 454 ಜನ ಪರವಾಗಿ ಮತದಾನ ಮಾಡಿದರೆ, ಇಬ್ಬರು ಮಾತ್ರ ಇದನ್ನು ವಿರೋಧಿಸಿದ್ದಾರೆ.
ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಇ-ಇಥೇಹಾದುಲ್ ಮುಸಲ್ಮಿನ್ (AIMIM) ಪಕ್ಷದ ಇಬ್ಬರು ಸಂಸದರು ಮಾತ್ರ ಇದನ್ನು ವಿರೋದಿಸಿದ್ದಾರೆ. ಬಹುತೇಕರು ಈ ಮಸೂದೆ ಪರ ಮತ ಚಲಾಯಿಸಿದ ಹಿನ್ನಲೆಯಲ್ಲಿ ಈ ಐತಿಹಾಸಿಕ ಮಸೂದೆ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಸುಲಭವಾಗಿ ಅನುಮೋದನೆ ಸಿಕ್ಕಿತು.
ಎಐಸಿಸಿ ನಾಯಕಿ ಸೋನಿಯಾ ಗಾಂಧಿ (Sonia Gandhi) ಚರ್ಚೆ ಆರಂಭಿಸಿದರು. ಇದು ರಾಜೀವ್ಗಾಂಧಿ ಕನಸು. ಈಗ ನನಸಾಗುತ್ತಿದೆ ಎನ್ನುವ ಮೂಲಕ ಕ್ರೆಡಿಟ್ ಪಡೆಯಲು ಯತ್ನಿಸಿದರು. ಈ ಮೀಸಲಾತಿಯನ್ನು ಜಾರಿಗೆ ತರಲು ತಕ್ಷಣ ಜಾತಿಗಣತಿ ನಡೆಸಬೇಕು ಎಂದು ಅವರು ಮನವಿ ಮಾಡಿದರು. ಆದರೆ, ರಾಜೀವ್ ಕನಸು ಎಂದಿದ್ದಕ್ಕೆ ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದರು.
ಒಬಿಸಿ ಕೋಟಾಗೆ ರಾಹುಲ್ ಗಾಂಧಿ ಕೂಡ ಪಟ್ಟು ಹಿಡಿದರು. ಮಸೂದೆಗೆ ನಮ್ಮ ಬೆಂಬಲವಿದೆ. ಆದರೆ ಓಬಿಸಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸದಿದ್ದರೆ ಈ ಬಿಲ್ ಅಪೂರ್ಣ ಎಂದರು. 2024ರ ಚುನಾವಣೆಯಲ್ಲೇ ಮೀಸಲಾತಿ ಜಾರಿ ಮಾಡಿ ಮೋದಿ ತಾಕತ್ ತೋರಿಸಬೇಕು ಎಂದು ಟಿಎಂಸಿ ಮಹುವಾ ಮೋಯಿತ್ರಾ ಸವಾಲು ಹಾಕಿದರು.