ಮಹಿಳಾ ವರ್ಲ್ಡ್ ಕಪ್: ಭಾರತ vs ಪಾಕ್
ಮೌಂಟ್ ಮಾಂಗನೊಯಿಯಲ್ಲಿ ಇಂಡೋ-ಪಾಕ್ ಕದನ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ
ನಿಗದಿತ 50 ಓವರ್ ಗಳಲ್ಲಿ ಭಾರತ 7 ವಿಕೆಟ್ ಗೆ 244 ರನ್
ಪಾಕಿಸ್ತಾನಕ್ಕೆ ಪಂದ್ಯ ಗೆಲ್ಲಲು 244 ರನ್ ಗುರಿ ನೀಡಿದ ಭಾರತ
ಮೌಂಟ್ ಮಾಂಗನೊಯಿ ಅಂಗಳದಲ್ಲಿ ವಿಶ್ವ ಕ್ರಿಕೆಟ್ ನ ಬದ್ಧ ವೈರಿಗಳು ಮುಖಾಮುಖಿಯಾಗಿವೆ. ಮಹಿಳಾ ವಿಶ್ವಕಪ್ ನ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಟೀಂ ಇಂಡಿಯಾ 244 ರನ್ ಗಳಿಸಿದೆ. ಆ ಮೂಲಕ ಪಾಕಿಸ್ತಾನಕ್ಕೆ 245 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂದಾನ 50 ರನ್, ದೀಪ್ತಿ ಶರ್ಮಾ 40, ಸ್ನೇಹ್ ರಾಣಾ 53 ರನ್, ಪೂಜಾ ವಸ್ತ್ರಕರ್ 67 ರನ್ ಗಳಿಸಿದರು. ಇದರೊಂದಿಗೆ ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದೆ.
ಆದ್ರೆ ಈ ಪಂದ್ಯದಲ್ಲಿ ಭಾರತದ ಮಿಡಲ್ ಆರ್ಡರ್ ಸಂಪೂರ್ಣವಾಗಿ ವಿಫಲವಾಯ್ತು. ಆಂರಭದಲ್ಲಿಯೇ ಖಾತೆ ತೆರೆಯದೇ ಶಫಾಲಿ ವರ್ಮಾ ನಿರ್ಗಮಿಸಿದರು. ಇದಾದ ಬಳಿಕ ಮಂದಾನ ಮತ್ತು ದೀಪ್ತಿ ಉತ್ತಮ ಜೊತೆಯಾಟವಾಡಿದರು. ಈ ಹಂತದಲ್ಲಿ ದೀಪ್ತಿ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಮಿಥಾಲಿ ರಾಜ್ 9 ರನ್, ಹರ್ಮಿನ್ ಪ್ರೀತ್ 5 ರನ್, ರಿಚಾ ಘೋಷ್ 1 ರನ್ ಗಳಿಸಿದರು. ಸಂಕಷ್ಟದಲ್ಲಿದ್ದ ಭಾರತಕ್ಕೆ ಕೆಳಕ್ರಮಾಂಕದ ಆಟಗಾರ್ತಿಯರು ನೆರವಾದ್ರು.
ಸದ್ಯ 245ರನ್ ಗುರಿ ಬೆನ್ನತ್ತಿರುವ ಪಾಕಿಸ್ತಾನ ಒಂದು ವಿಕೆಟ್ ಕಳೆದುಕೊಂಡಿದೆ. Women’s World Cup: India vs Pak match