ಏಕದಿನ ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಭಾರತವು ವಿಶ್ವಕಪ್ ನ ಆತಿಥ್ಯ ವಹಿಸಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಅಭಿಮಾನಿಗಳ ಥ್ರಿಲ್ ಹೆಚ್ಚಿಸಲು ಹೊಸ ಹೊಸ ಯೋಜನೆಗಳನ್ನು ತರಲಾಗಿದೆ. ಈ ಟೂರ್ನಿಯಲ್ಲಿ 3 ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಭಾರತದ ಕೆಲವು ಕ್ರೀಡಾಂಗಣದಲ್ಲಿ ಸಣ್ಣ ಬೌಂಡರಿ ಲೈನ್ ಗಳು ಇರುವುದರಿಂದಾಗಿ ಬೌಂಡರಿ ನಿಯಮಗಳನ್ನು ಸಿದ್ಧಪಡಿಸಿದೆ. ಇದರಲ್ಲಿ ಬೌಂಡರಿ ಗಡಿ 70 ಮೀಟರ್‌ಗಿಂತ ಕಡಿಮೆ ಇರಬಾರದು ಆದರೆ ಹೆಚ್ಚು ಇರಬಹುದು ಎಂದು ಹೇಳಲಾಗಿದೆ.
ಐಸಿಸಿ ಸಾಫ್ಟ್ ಸಿಗ್ನಲ್ ನಿಯಮವನ್ನು ರದ್ದುಗೊಳಿಸಿದೆ. ಸಾಫ್ಟ್ ಸಿಗ್ನಲ್ ನಿಯಮದಲ್ಲಿ, ಅಂಪೈರ್ ಯಾವುದೇ ವಿಕೆಟ್‌ಗೆ ಮೂರನೇ ಅಂಪೈರ್‌ನ ಸಹಾಯವನ್ನು ಪಡೆಯಲು ಬಯಸಿದರೆ, ಮೊದಲು ಎರಡನೇ ಅಂಪೈರ್‌ನೊಂದಿಗೆ ಮಾತನಾಡಿದ ನಂತರ ನಿರ್ಧಾರ ಕೈಗೊಳ್ಳಬಹುದು.
ಮೂರನೇ ಅಂಪೈರ್ ಸಹ ಆ ವಿಕೆಟ್ ಅನ್ನು ಸರಿಯಾಗಿ ಪರೀಕ್ಷಿಸಲು ವಿಫಲವಾದರೆ, ನಂತರ ಮೈದಾನದಲ್ಲಿ ಅಂಪೈರ್‌ನ ನಿರ್ಧಾರ ಪರಿಗಣಿಸಲಾಗುತ್ತದೆ.
ಸೂಪರ್ ಓವರ್ ಟೈ ಆಗಿದ್ದರೆ ಪಂದ್ಯ ನಿರ್ಧಾರವಾಗುವವರೆಗೆ ನಿರಂತರ ಸೂಪರ್ ಓವರ್ ಗಳನ್ನು ಆಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.