ವಿಶ್ವ ಮಲೇರಿಯಾ ದಿನ: 2030ರ ವೇಳೆಗೆ ಮಲೇರಿಯಾ ಮುಕ್ತ ದೇಶವಾಗಲು ಭಾರತ ಪಣ…
ಮಲೇರಿಯಾ ರೋಗದ ವಿರುದ್ಧ ಜಾಗತಿಕ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಜನರ ಆರೋಗ್ಯ, ಜೀವನೋಪಾಯಕ್ಕೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿರುವ ಮಲೇರಿಯಾ ತಡೆಗಟ್ಟ ಬಹುದಾದ ಮತ್ತು ಗುಣಪಡಿಸಬಹುದಾದ ಕಾಯಿಲೆಯಾಗಿದೆ.
ಮಲೇರಿಯಾವು ಸಾಂಕ್ರಾಮಿಕ ರೋಗ. ಇದು ಒಂದು ನಿರ್ದಿಷ್ಟ ರೀತಿಯ ಸೊಳ್ಳೆಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆಯು ವ್ಯಕ್ತಿಯನ್ನು ಕಚ್ಚಿದಾಗ, ಪ್ಲಾಸ್ಮೋಡಿಯಂ ಪರಾವಲಂಬಿಗಳನ್ನು ರಕ್ತಕ್ಕೆ ಚುಚ್ಚುತ್ತದೆ, ಈ ಮೂಲಕ ಹೀಗಾಗಿ ಮನುಷ್ಯರನ್ನ ಸೋಂಕಿತರನ್ನಾಗಿ ಮಾಡುತ್ತದೆ.
ವಿಶ್ವ ಮಲೇರಿಯಾ ದಿನ 2022: ಥೀಮ್
ಈ ವರ್ಷದ ಮಲೇರಿಯಾ ದಿನದ ಥೀಮ್ ‘ಮಲೇರಿಯಾ ರೋಗದ ಹೊರೆಯನ್ನು ಕಡಿಮೆ ಮಾಡಲು ಮತ್ತು ಜೀವಗಳನ್ನು ಉಳಿಸಲು ನಾವೀನ್ಯತೆಯನ್ನು ಬಳಸಿಕೊಳ್ಳಿ’. ಎಂಬುದು
ವಿಶ್ವ ಮಲೇರಿಯಾ ದಿನ 2022: ಇತಿಹಾಸ
ವಿಶ್ವ ಮಲೇರಿಯಾ ದಿನವನ್ನು ಮೊದಲು ಆಫ್ರಿಕಾ ಮಲೇರಿಯಾ ದಿನ ಎಂದು ಪ್ರಾರಂಭಿಸಲಾಯಿತು. ಈ ದಿನವನ್ನು ಆಫ್ರಿಕನ್ ಸರ್ಕಾರವು 2001 ರಿಂದ ಆಚರಿಸುತ್ತಿದೆ ಆದರೆ ವಿಶ್ವ ಆರೋಗ್ಯ ಸಂಸ್ಥೆಯ 60 ನೇ ಅಧಿವೇಶನದಲ್ಲಿ ಆಫ್ರಿಕಾ ಮಲೇರಿಯಾ ದಿನವನ್ನು ವಿಶ್ವ ಮಲೇರಿಯಾ ದಿನವಾಗಿ ಪರಿವರ್ತಿಸಲಾಯಿತು. 2020 ರ ಅಂಕಿ ಅಂಶಗಳ ಪ್ರಕಾರ 85 ದೇಶಗಳಲ್ಲಿ 241 ಮಿಲಿಯನ್ ಹೊಸ ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 6,27,000 ಮಲೇರಿಯಾ ಸಾವುಗಳು ಸಂಭವಿಸಿವೆ.
ಭಾರತವು 2030 ರ ವೇಳೆಗೆ ಮಲೇರಿಯಾ ಮುಕ್ತ ದೇಶವನ್ನಾಗಿಸುಲು ಪಣ ತೊಟ್ಟಿದೆ. ಮಲೇರಿಯಾ ನಿರ್ಮೂಲನೆಗಾಗಿ ರಾಷ್ಟ್ರೀಯ ಚೌಕಟ್ಟು (NFME) ಗೆ ಸಹಿ ಮಾಡಿದೆ. 2017 ಕ್ಕೆ ಹೋಲಿಸಿದರೆ ಇಲ್ಲಿಯವೆರೆಗೆ ಮಲೇರಿಯಾ ಪ್ರಕರಣಗಳ ಸಂಖ್ಯೆಯನ್ನು ಶೇಕಡಾ 60 ರಷ್ಟು ಕಡಿಮೆ ಮಾಡಲು ಸಾಧ್ಯವಾಗಿದೆ. 2018 ಕ್ಕೆ ಹೋಲಿಸಿದರೆ 46 ಶೇಕಡಾ ಕಡಿತವನ್ನು ದಾಖಲಿಸಿದೆ. ಮಲೇರಿಯಾ ಮುಕ್ತ ಗುರಿಯನ್ನು ಸಾಧಿಸುವತ್ತ ಸಾಗುತ್ತಿರುವ ರಾಜ್ಯಗಳಲ್ಲಿ ಒಡಿಶಾ ಕೂಡ ಒಂದು. ಕಳೆದ ಮೂರು ವರ್ಷಗಳಲ್ಲಿ ಮಲೇರಿಯಾ ಪ್ರಕರಣಗಳಲ್ಲಿ ಶೇ 90ರಷ್ಟು ಇಳಿಕೆಯಾಗಿದೆ ಎಂದು ರಾಜ್ಯ ಸರ್ಕಾರ ಕಳೆದ ವರ್ಷ ಪ್ರಕಟಿಸಿತ್ತು.