‘ಪತ್ರಕರ್ತರಿಗೆ ಅಪಾಯಕಾರಿ ರಾಷ್ಟ್ರಗಳ ಪೈಕಿ ಭಾರತವೂ ಒಂದು’ – ಜಾಗತಿಕ ವರದಿ ಏನ್ ಹೇಳುತ್ತೆ..?
ನವದೆಹಲಿ : ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 142ನೇ ಸ್ಥಾನದಲ್ಲಿದೆ. ಹೌದು.. ಅಂತರಾಷ್ಟ್ರೀಯ ಸಂಸ್ಥೆಯಾದ ರಿಪೋರ್ಟ್ಸ್ ವಿದೌಟ್ ಬಾರ್ಡರ್ಸ್ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ಬಾರತಕ್ಕೆ 142ನೇ ಸ್ಥಾನ ಸಿಕ್ಕಿದೆ.
2016ರಿಂದ ಈವರೆಗೂ ಭಾರತವು ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಇಳಿಕೆ ಕಾಣುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಲ್ಲದೇ ಈ ರಿಪೋರ್ಟ್ ಅನ್ವಯ ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸುವ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಭಾರತವೂ ಕೂಡ ಒಂದಾಗಿದೆ ಎಂಬ ವಿಚಾರ ತಿಳಿದುಬಂದಿದೆ.
ಅಲ್ಲದೇ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಮಾಧ್ಯಮಗಳ ಮೇಲಿನ ಒತ್ತಡ ಇನ್ನಷ್ಟು ಅಧಿಕವಾಗಿದೆ ಎಂದು ವರದಿ ಹೇಳಿದೆ. ಹಿಂದುತ್ವ ಅನುಯಾಯಿಗಳ ಆಕ್ರೋಶಕ್ಕೆ ತುತ್ತಾಗುವ ಪತ್ರಕರ್ತರಿಗೆ ಭಾರತದಲ್ಲಿ ಬೆದರಿಕೆಗಳೂ ಬರುತ್ತವೆ ಎಂದು ವರದಿ ತಿಳಿಸಿದೆ.
ಅಲ್ಲದೇ ವರದಿಯಲ್ಲಿ ಕಾಶ್ಮೀರದ ಸ್ಥಿತಿಯೂ ಉಲ್ಲೇಖವಾಗಿದೆ. ಕಾಶ್ಮೀರದ ಸ್ಥಿತಿ ಆತಂಕಕಾರಿಯಾಗಿದೆ. ಅಲ್ಲಿ ಪತ್ರಕರ್ತರಿಗೆ ಆಗಾಗ ಪೊಲೀಸರು ಮತ್ತು ಅರೆಸೇನಾ ಪಡೆಗಳಿಂದ ಕಿರುಕುಳವಾಗುತ್ತಿದೆ, ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನೂ ಚೀನಾ 177, ಪಾಕಿಸ್ತಾನ 145 ನೇ ಸ್ಥಾನದಲ್ಲಿವೆ.
ಇನ್ನೂ ಮೊದಲನೇ ಸ್ಥಾನದಲ್ಲಿ ನಾರ್ವೇ ಅಗ್ರ ಸ್ಥಾನದಲ್ಲಿದ್ದು ನಂತರದ ಸ್ಥಾನಗಳಲ್ಲಿ ಫಿನ್ ಲ್ಯಾಂಡ್ ಹಾಗೂ ಡೆನ್ಮಾರ್ಕ್ ದೇಶಗಳು ಇವೆ. ಈ ಸೂಚ್ಯಾಂಕದಲ್ಲಿ ಎರಿಟ್ರಿಯಾ ಉತ್ತರ ಕೊರಿಯಾ , ಟುರ್ಕ್ಮೆನಿಸ್ತಾನ್ ಕೊನೆಯ ಸ್ಥಾನದಲ್ಲಿವೆ.
ಕೊರೊನಾ ಹಾವಳಿ – ‘ಅಮೇರಿಕನ್ನರು ಭಾರತ ಪ್ರವಾಸ ಕೈಗೊಳ್ಳಬಾರದು’..!
ನಾಳೆ ನಡೆಯಬೇಕಿದ್ದ ಕೆಪಿಎಸ್ ಸಿ ಎಕ್ಸಾಂ ಮುಂದೂಡಿಕೆ
ಕುಂಭಮೇಳದಲ್ಲಿ ಭಾಗಿಯಾಗಿದ್ದ ನೇಪಾಳದ ಮಾಜಿ ರಾಜ ರಾಣೆಗೆ ಕೊರೊನಾ ಪಾಸಿಟಿವ್..!
ದೇಶದ ಸುರಕ್ಷತೆಗಾಗಿ ಹದ್ದಿನ ಕಣ್ಣಿಟ್ಟಿರುತ್ತಾರೆ, ‘ಡಿಫೆನ್ಸ್ ಬೈ ಅಫೆನ್ಸ್’ ಇವರ ಧ್ಯೇಯವಾಕ್ಯ – ಗರುಡ ಕಮಾಂಡೋ