ವಿಶ್ವಟೆಸ್ಟ್ ಚಾಂಪಿಯನ್ ಶಿಪ್ : ಐದನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ World Test Championship saaksha tv
ನವದೆಹಲಿ : ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲಿನ ಬಳಿಕ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಟೀಂ ಇಂಡಿಯಾ ಐದನೇ ಸ್ಥಾನಕ್ಕೆ ಕುಸಿದು ಬಿದ್ದಿದೆ.
ಮೂರು ಮ್ಯಾಚ್ ಗಳ ಸರಣಿಯಲ್ಲಿ ಟೀಂ ಇಂಡಿಯಾ 1-2 ರ ಅಂತರದೊಂದಿಗೆ ಸರಣಿ ಸೋತಿದೆ.
ಸರಣಿ ಗೆಲ್ಲುವ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ಗಳಿಂದ ಸೋಲು ಕಂಡಿದ ಪರಿಣಾಮ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಪಡೆ ಐದನೇ ಸ್ಥಾನಕ್ಕೆ ಕುಸಿದಿದೆ.
WTCಯ ಎರಡನೇ ಆವೃತ್ತಿಯಲ್ಲಿ 49.07 ಶೇಕಡಾವಾರು ಅಂಕಗಳೊಂದಿಗೆ ಭಾರತ ಐದನೇ ಸ್ಥಾನದಲ್ಲಿದೆ.
ಭಾರತವು ಒಂಬತ್ತು ಟೆಸ್ಟ್ಗಳನ್ನು ಆಡಿದ್ದು, ನಾಲ್ಕು ಗೆದ್ದಿದೆ, ಮೂರರಲ್ಲಿ ಸೋತಿದೆ ಮತ್ತು ಎರಡು ಡ್ರಾ ಮಾಡಿಕೊಂಡಿದೆ.
ಈ ಪಟ್ಟಿಯಲ್ಲಿ ಶ್ರೀಲಂಕಾ 100 PCT ಯೊಂದಿಗೆ ಅಗ್ರಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾ (83.33) ಮತ್ತು ಪಾಕಿಸ್ತಾನ (75) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.