ಕುಸ್ತಿ ಪಟುವಿನ ಮೇಲೆ ದುಷ್ಕರ್ಮಿಗಳ ದಾಳಿ, ಗುಂಡು ಹಾರಿಸಿ ಹತ್ಯೆ….
ಪುಣೆಯ ನಗರದ ಪಿಂಪ್ರಿ ಚಿಂಚ್‌ವಾಡ್‌ನ ಪ್ರದೇಶದಲ್ಲಿ ದುಚ್ಕರ್ಮಿಗಳು ಕಾರಿನ ಒಳಗೆ ಕುಳಿತಿದ್ದ ಕುಸ್ತಿ ಪಟುವಿನ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ. ಗನ್ ನಲ್ಲಿ ಶೂಟ್ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೀಡಿಯೋ ವೈರಲ್ ಆಗಿದೆ. ಮನೆಯ ಹೊರಗೆ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಮೂವರು ಅಪರಿಚಿತ ದುಷ್ಕರ್ಮಿಗಳು ಸಾಯುವವರೆಗೂ ಅವರ ಮೇಲೆ ಗುಂಡು ಹಾರಿಸುತ್ತಲೇ ಇದ್ದಾರೆ.
ಮೃತರನ್ನು ನಾಗೇಶ ಕರಾಳೆ ಎಂದು ಗುರುತಿಸಲಾಗುದ್ದು ಕುಸ್ತಿ ಅಖಾಡ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಂತಕರು ನಾಗೇಶ್‌ಗೆ 6 ಗುಂಡುಗಳನ್ನು ಹೊಡೆದಿದ್ದಾರೆ. ಈ ಪೈಕಿ ಎರಡು ಗುಂಡುಗಳು ಅವರ ತಲೆಗೆ ತಗುಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಶೆಲ್ಪಿಂಪಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಳೆ ದ್ವೇಷವೇ ಹತ್ಯೆಗೆ ಕಾರಣ ಎನ್ನಲಾಗಿದೆ. ಕೊಲೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟೀಮ್ ಇಂಡಿಯಾದ ಟರ್ಬನೇಟರ್ – ಹರ್ಭಜನ್ ಸಿಂಗ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ……








