ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಆಗ್ರಹಿಸಿ ಅಗ್ರ ಏಳು ಮಹಿಳಾ ಕುಸ್ತಿಪಟುಗಳು ಸುಪ್ರೀಮ್ ಮೊರೆ ಹೋಗಿದ್ದಾರೆ.
ಮಂಗಳವಾರ ಅರ್ಜಿ ವಿಚಾರಿಸಿದ ಸುಪ್ರೀಮ್ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಏ.28ಕ್ಕೆ ವಿಚಾರಣೆ ನಡೆಸಲು ಪಟ್ಟಿ ಮಾಡಿದ್ದಾರೆ. ಇದೇ ವೇಳೆ ಸುಪ್ರೀಮ್ ಕೋರ್ಟ್ ದೆಹಲಿ ಪೊಲೀಸರಿಗೆ ನೋಟೀಸ್ ಜಾರಿ ಮಾಡಿದೆ. ಕಳೆದ ಶುಕ್ರವಾರ ಕುಸ್ತಿಪಟುಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ದೇಶವನ್ನು ಪ್ರತಿನಿಧಿಸಿದ್ದ ಕುಸ್ತಿಪಟುಗಳ ಅರ್ಜಿಯಲ್ಲಿ ಗಂಭೀರವಾದ ಆರೋಪಗಿವೆ ಎಂದು ಹೇಳಿದರು. ಭಾನುವಾರ ರಾತ್ರಿ ಜಂತರ್ ಮಂತರ್ನಲ್ಲಿ ಮಲಗಿದ್ದ ಕುಸ್ತಿಪಟುಗಳು ಪ್ರಧಾನಿ ಮೋದಿ ಅವರ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ರಾಜಕೀಯ ಪಕ್ಷ, ರೈತ ಸಂಘ, ಮಹಿಳಾ ಸಂಘ ಮತ್ತು ಇತರೆ ಸಂಘಟನೆಗಳಿಂದ ಕುಸ್ತಿಪಟುಗಳು ಬೆಂಬಲ ಕೋರಿದ್ದಾರೆ. ಹೋರಾಟಕ್ಕೆ ರಾಜಕೀಯ ಬಣ್ಣ ಹಚ್ಚದಂತೆ ಇದೇ ವೇಳೆ ಕುಸ್ತಿಪಟುಗಳು ಕೋರಿದ್ದಾರೆ.